ನವದೆಹಲಿ: ಒಂದೇ ದಿನ 1 ಕೋಟಿಗೂ ಅಧಿಕ ಕೊರೊನಾ ಲಸಿಕೆ ನೀಡುವ ಮೂಲಕ ಭಾರತ ಹೊಸ ಮೈಲಿಗಲ್ಲು ನೆಟ್ಟಿದೆ. ಶುಕ್ರವಾರ ಹೊಸ ದಾಖಲೆ ಬರೆದಿರುವ ಭಾರತ, ಒಂದೇ ದಿನ 1 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದೆ.
ಒಟ್ಟು 1 ಕೋಟಿ 63 ಸಾವಿರದ 931 ಜನರಿಗೆ ಶುಕ್ರವಾರ ಲಸಿಕೆ ಹಾಕಲಾಗಿದೆ. ಇದರಲ್ಲಿ ಉತ್ತರಪ್ರದೇಶದಲ್ಲಿ ಅತೀ ಹೆಚ್ಚು ಅಂದ್ರೆ 28,62,649, ಕರ್ನಾಟಕದಲ್ಲಿ 1,079,588, ಮಹಾರಾಷ್ಟ್ರದಲ್ಲಿ 9,84,117 ಡೋಸ್ಗಳನ್ನು ವಿತರಣೆ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, 1 ಕೋಟಿ ತಲುಪುವುದು ಮಹತ್ವದ ಮೈಲಿಗಲ್ಲು. ಲಸಿಕೆ ಪಡೆದವರಿಗೆ ಹಾಗೂ ಲಸಿಕೆ ಹಾಕುವಲ್ಲಿ ಯಶಸ್ವಿಯಾದವರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.