ಕರ್ನಾಟಕ

karnataka

ETV Bharat / bharat

22 ಕೋಟಿಗೂ ಅಧಿಕ ಜನರಿಗೆ ಕೋವಿಡ್ ಲಸಿಕೆ ನೀಡಿಕೆ : 1 ಲಕ್ಷ ಡೋಸ್ ರವಾನೆಗೆ ಸಿದ್ಧತೆ! - India’s COVID Vaccination drive

ಕೇಂದ್ರ ಸರ್ಕಾರ ಇದುವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಮತ್ತು ರಾಜ್ಯಗಳ ನೇರ ಖರೀದಿ ವ್ಯವಸ್ಥೆ ಮೂಲಕ ಒಟ್ಟು 22 ಕೋಟಿಗಿಂತ ಹೆಚ್ಚಿನ (22,00,59,880)ಡೋಸ್ ಲಸಿಕೆಗಳನ್ನು ಒದಗಿಸಿದೆ. ವ್ಯರ್ಥವಾದುದು ಸೇರಿದಂತೆ ಒಟ್ಟು ಬಳಕೆಯ ಲಸಿಕೆಯ ಪ್ರಮಾಣ 20,13,74,636 ಡೋಸ್ ಆಗಿದೆ..

Vaccination
Vaccination

By

Published : May 26, 2021, 7:52 PM IST

ನವದೆಹಲಿ: ರಾಷ್ಟ್ರವ್ಯಾಪಿ ಲಸಿಕಾ ಆಂದೋಲನದ ಭಾಗವಾಗಿ ಕೇಂದ್ರ ಸರ್ಕಾರ, ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಲಸಿಕೆ ವಿತರಿಸುತ್ತಿದೆ.

ಕೇಂದ್ರ ಸರ್ಕಾರ ಇದುವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಮತ್ತು ರಾಜ್ಯಗಳ ನೇರ ಖರೀದಿ ವ್ಯವಸ್ಥೆ ಮೂಲಕ ಒಟ್ಟು 22 ಕೋಟಿಗಿಂತ ಹೆಚ್ಚಿನ (22,00,59,880)ಡೋಸ್ ಲಸಿಕೆಗಳನ್ನು ಒದಗಿಸಿದೆ. ವ್ಯರ್ಥವಾದುದು ಸೇರಿದಂತೆ ಒಟ್ಟು ಬಳಕೆಯ ಲಸಿಕೆಯ ಪ್ರಮಾಣ 20,13,74,636 ಡೋಸ್ ಆಗಿದೆ.

ಇದನ್ನೂ ಓದಿ: ವ್ಯಾಕ್ಸಿನೇಷನ್ ಪ್ರಮಾಣಪತ್ರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರೆ ಕಾದಿದೆ ಅಪಾಯ !

ವೇಗವರ್ಧಿತ 3ನೇ ಹಂತದ ಕೋವಿಡ್ -19 ಲಸಿಕಾ ಆಂದೋಲನದ ಅನುಷ್ಠಾನ ಮೇ 1ರಿಂದ ಆರಂಭವಾಗಿದೆ. ಈ ಕಾರ್ಯತಂತ್ರದಡಿ ಕೇಂದ್ರೀಯ ಔಷಧ ಪ್ರಯೋಗಾಲಯವು ಅನುಮೋದಿಸುವ ಲಸಿಕಾ ತಯಾರಿಕಾ ಕಂಪನಿಗಳ ಶೇ.50ರಷ್ಟು ಲಸಿಕೆಯನ್ನು ಕೇಂದ್ರ ಪ್ರತಿ ತಿಂಗಳು ಖರೀದಿಸಲಿದೆ. ಅಲ್ಲದೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಿಂದಿನಂತೆ ಉಚಿತವಾಗಿ ಪೂರೈಸಲಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1.77 ಕೋಟಿಗಿಂತ ಹೆಚ್ಚಿನ ಡೋಸ್ (1,77,52,594) ಲಸಿಕೆಯು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿದೆ.

1 ಲಕ್ಷ ಲಸಿಕೆ ಡೋಸ್​ಗಳನ್ನು ಕಳಿಸಲು ಕೇಂದ್ರ ಸರ್ಕಾರ ಸಕಲ ಸಿದ್ದತೆ ನಡೆಸಿದ್ದು, ಇನ್ನು ಮೂರು ದಿನಗಳಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸ್ವೀಕರಿಸಲಿವೆ.

ABOUT THE AUTHOR

...view details