ಕರ್ನಾಟಕ

karnataka

ETV Bharat / bharat

ಭಾರತದಲ್ಲಿ 3,993 ಕೋವಿಡ್​ ಕೇಸ್​ ದಾಖಲು: 108 ಮಂದಿ ಬಲಿ - covid case tracker

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3,993 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ದೇಶದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,9948ಕ್ಕೆ ಏರಿದ್ದು, ಇದು ದೇಶದ ಒಟ್ಟು ಕೊರೊನಾ ಪ್ರಕರಣದ 0.12 ಪ್ರತಿಶತ ಎಂದು ಹೇಳಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

india-covid19-tracker
ಕೋವಿಡ್ 19: ಭಾರತದಲ್ಲಿ 3,993 ಹೊಸ ಪ್ರಕರಣಗಳು, ಕಳೆದ 24ಗಂಟೆಗಳಲ್ಲಿ 108 ಸಾವು

By

Published : Mar 8, 2022, 2:13 PM IST

ನವದೆಹಲಿ : ಕಳೆದ 24 ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ ಒಟ್ಟು 3993 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವರದಿ ಮಾಡಿದೆ. ಈ ಮೂಲಕ ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 4,9948ಕ್ಕೆ ಏರಿದ್ದು, ಇದು ದೇಶದ ಒಟ್ಟು ಕೊರೊನಾ ಪ್ರಕರಣದ 0.12 ಪ್ರತಿಶತ ಎಂದು ಹೇಳಿದೆ.

ದೇಶದ ದೈನಂದಿನ ಪೊಸಿಟಿವಿಟಿ ದರವು ಶೇಕಡಾ 0.46 ರಷ್ಟಿದ್ದರೆ, ವಾರದ ಪೊಸಿಟಿವಿಟಿ ದರವು ಶೇಕಡಾ 0.68 ರಷ್ಟಿದೆ ಎಂದು ಹೇಳಿದೆ. ಈ ಮಧ್ಯೆ ಕಳೆದ 24 ಗಂಟೆಗಳಲ್ಲಿ ಒಟ್ಟು 8,055 ಜನರು ಕೋವಿಡ್ 19 ಸೋಂಕಿನಿಂದ ಗುಣಮುಖರಾಗಿದ್ದು, ಈ ಮೂಲಕ ಒಟ್ಟು ಗುಣಮುಖರಾದವರ ಸಂಖ್ಯೆ 4,24,06,150 ಕ್ಕೆ ತಲುಪಿದೆ ಎಂದು ಹೇಳಿದೆ.

ಸದ್ಯ ಚೇತರಿಕೆಯ ಪ್ರಮಾಣವು 98.68 ಪ್ರತಿಶತದಷ್ಟಿದೆ ಎಂದು ಹೇಳಿದೆ. ಜೊತೆಗೆ ಕಳೆದ 24 ಗಂಟೆಗಳಲ್ಲಿ 108 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ 8,73,395 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದುವರೆಗೆ ನಡೆಸಲಾದ ಒಟ್ಟು ಕೋವಿಡ್ ಪರೀಕ್ಷೆಗಳ ಸಂಖ್ಯೆ 77.43 ಕೋಟಿಗೆ ಏರಿಕೆಯಾಗಿದೆ. ರಾಷ್ಟ್ರವ್ಯಾಪಿ ಕೋವಿಡ್ 19 ಲಸಿಕೆ ಅಭಿಯಾನದಡಿ ಅರ್ಹ ಫಲಾನುಭವಿಗಳಿಗೆ ಇದುವರೆಗೆ ಒಟ್ಟು 179.13 ಕೋಟಿ ಡೋಸ್‌ಗಳನ್ನು ನೀಡಲಾಗಿದೆ ಎಂದು ಸಚಿವಾಲಯ ಹೇಳಿದೆ.

ಓದಿ :ವಿಶ್ವ ಮಹಿಳಾ ದಿನ: ವಿಧಾನಸಭೆಗೆ ಕುದುರೆ ಏರಿ ಬಂದ ಕಾಂಗ್ರೆಸ್ ಶಾಸಕಿ..ವಿಡಿಯೋ

ABOUT THE AUTHOR

...view details