ನವದೆಹಲಿ:ಕಳೆದ 24 ಗಂಟೆಯಲ್ಲಿ ದೇಶದಲ್ಲಿ 2,40,842 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 3,55,102 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 3,741 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಹೊಸ ಪ್ರಕರಣಗಳ ಸೇರ್ಪಡೆಯೊಂದಿಗೆ ದೇಶದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 2,65,30,132 ಕ್ಕೆ ಏರಿಕೆಯಾಗಿದೆ. ಇದುವರೆಗೆ 2,34,25,467 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇದನ್ನೂಓದಿ: ಮೋದಿ ಪ್ರಧಾನಿಯಾಗಿ ಮೇ 26ಕ್ಕೆ ಏಳು ವರ್ಷ: 'ಬ್ಲ್ಯಾಕ್ ಡೇ' ಆಚರಣೆಗೆ ರೈತರ ಸಿದ್ಧತೆ
ಇದುವರೆಗೆ 2,99,266 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 28,05,399 ಇದೆ. ಇದುವರೆಗೆ 19,50,04,184 ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ.
ಶುಕ್ರವಾರ 2,57,299 ಹೊಸ ಕೋವಿಡ್ ಪತ್ತೆಯಾಗಿ, 4,194 ಮಂದಿ ಬಲಿಯಾಗಿದ್ದರು. ಶುಕ್ರವಾರಕ್ಕೆ ಹೋಲಿಕೆ ಮಾಡಿದರೆ ಶನಿವಾರ ಹೊಸ ಪ್ರಕರಣಗಳು ಮತ್ತು ಮೃತಪಟ್ಟವರ ಸಂಖ್ಯೆಯಲ್ಲಿ ಇಳಿಕೆಯಾಗಿದೆ.