ನವದೆಹಲಿ: ಕಳೆದ ಹಲವು ತಿಂಗಳಿಂದ ಇದೇ ಮೊದಲ ಬಾರಿಗೆ ದೇಶದಲ್ಲಿ ಅತಿ ಕಡಿಮೆ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಭಾರತದಲ್ಲಿ ಹೊಸದಾಗಿ 28,591 ಜನರಿಗೆ ಕೋವಿಡ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 3,32,36,921 ಕ್ಕೆ ಏರಿದೆ.
ಕಳೆದ 24 ಗಂಟೆಗಳಲ್ಲಿ 34,848 ಜನರು ವೈರಸ್ನಿಂದ ಗುಣಮುಖರಾಗಿದ್ದು, ಈವರೆಗೆ 3,24,09,345 ಮಂದಿ ಚೇತರಿಸಿಕೊಂಡಿದ್ದಾರೆ. ಒಂದೇ ದಿನ 338 ಸೋಂಕಿತರು ಮೃತಪಟ್ಟಿದ್ದು, ಈವರೆಗೆ 4,42,655 ಜನರು ಸಾವನ್ನಪ್ಪಿದ್ದಾರೆ. ಪ್ರಸ್ತುತ ದೇಶದಲ್ಲಿ 3,84,921 ಸಕ್ರಿಯ ಕೋವಿಡ್ ಪ್ರಕರಣಗಳಿವೆ.
ದೇಶದಲ್ಲಿ ವ್ಯಾಕ್ಸಿನೇಷನ್ ಬಿರುಸಿನಿಂದ ಸಾಗಿದ್ದು, ಕಳೆದ 24 ಗಂಟೆಗಳಲ್ಲಿ 72,86,883 ವ್ಯಾಕ್ಸಿನ್ ಡೋಸ್ಗಳನ್ನು ನೀಡಲಾಗಿದ್ದು, ಈವರೆಗೆ 73,82,07,378 ಲಸಿಕೆ ಡೋಸ್ಗಳನ್ನು ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ಕೊರೊನಾ ವಿರುದ್ಧ ಮತ್ತೊಂದು ಅಸ್ತ್ರ.. ಅಕ್ಟೋಬರ್ ಆರಂಭದಲ್ಲಿ Zydus Cadila ಲಸಿಕೆ ಲಭ್ಯ ಸಾಧ್ಯತೆ
ಸೆಪ್ಟೆಂಬರ್ 11 ರಂದು 15,30,125 ಜನರ ಗಂಟಲು ದ್ರವ ಮಾದರಿಗಳನ್ನು ತಪಾಸಣೆ ಮಾಡಲಾಗಿದ್ದು, ಈವರೆಗೆ 54,18,05,829 ಸ್ಯಾಂಪಲ್ಗಳನ್ನು ಟೆಸ್ಟ್ಗೆ ಒಳಪಡಿಸಲಾಗಿದೆ ಎಂದು ಐಸಿಎಂಆರ್(ICMR) ವರದಿ ಮಾಡಿದೆ.