ನವದೆಹಲಿ: ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 33,376 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 3,32,08,330 ಕ್ಕೇರಿದೆ. ನಿನ್ನೆ 308 ಮಂದಿ ವೈರಸ್ಗೆ ಬಲಿಯಾಗಿದ್ದು, ಈವರೆಗೆ 4,42,317 ಮಂದಿ ಮೃತಪಟ್ಟಿದ್ದಾರೆ.
ಸೋಂಕಿನಿಂದ 32,198 ಜನರು ಗುಣಮುಖರಾಗಿದ್ದು, ಸೆಪ್ಟೆಂಬರ್ 10 ರವರೆಗೆ 3,23,74,497 ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸದ್ಯ ಭಾರತದಲ್ಲಿ 3,32,08,330 ಕೇಸ್ಗಳು ಸಕ್ರಿಯವಾಗಿವೆ.