ಕರ್ನಾಟಕ

karnataka

ETV Bharat / bharat

ದೇಶದಲ್ಲಿ 6,422 ಹೊಸ ಕೋವಿಡ್ ಕೇಸ್​ ಪತ್ತೆ: 46ಕ್ಕೇರಿದ ಸಕ್ರಿಯ ಪ್ರಕರಣಗಳ ಸಂಖ್ಯೆ - ದೈನಂದಿನ ಧನಾತ್ಮಕತೆ ದರ

ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ದಾಖಲಾದ ಹೊಸ ಕೋವಿಡ್​​ 19 ಪ್ರಕರಣಗಳು, ಗುಣಮುಖರಾದವರು ಹಾಗು ವ್ಯಾಕ್ಸಿನೇಷನ್ ಮಾಹಿತಿ ಇಲ್ಲಿದೆ.

ಕೋವಿಡ್
covid report

By

Published : Sep 15, 2022, 11:06 AM IST

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 6,422 ಹೊಸ ಕೋವಿಡ್ ಪ್ರಕರಣಗಳು ಮತ್ತು 34 ಸಾವು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲೀಗ 46,389 ಸಕ್ರಿಯ ಪ್ರಕರಣಗಳಿವೆ. ಕಳೆದೊಂದು ದಿನದಲ್ಲಿ 5,748 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಒಟ್ಟು ಚೇತರಿಕೆಯ ಪ್ರಮಾಣ ಶೇ 98.71 ರಷ್ಟಿದೆ. ನಿನ್ನೆ ಮೃತಪಟ್ಟ ಒಟ್ಟು 34 ಮಂದಿ ಪೈಕಿ 20 ಮಂದಿ ಕೇರಳದಿಂದ ಸಾವನ್ನಪ್ಪಿದ್ದಾರೆ.

ದೈನಂದಿನ ಪಾಸಿಟಿವಿಟಿ ದರವು 2.04 % ಇದೆ. ಕೋವಿಡ್​ ಚೇತರಿಕೆ ದರ 98.71% ಕ್ಕೇರಿದೆ. ಸಾವಿನ ಪ್ರಮಾಣವು 1.19 % ಇದೆ. ರಾಷ್ಟ್ರವ್ಯಾಪಿ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಇದುವರೆಗೆ 215.98 ಕೋಟಿ ಕೋವಿಡ್ ಲಸಿಕಾ ಡೋಸ್​ ನೀಡಲಾಗಿದೆ.

ಇದನ್ನೂ ಓದಿ:ಕೋವಿಡ್​ ಸೋಂಕಿತ ವಯೋವೃದ್ಧರಿಗೆ ಮರೆವಿನ ಕಾಯಿಲೆ ಸಾಧ್ಯತೆ: ಅಧ್ಯಯನ

ABOUT THE AUTHOR

...view details