ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 7,946 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 37 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಇದೇ ಅವಧಿಯಲ್ಲಿ 9,828 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ 62,748 ಸಕ್ರಿಯ ಪ್ರಕರಣಗಳಿವೆ. ಈಗಿನ ಕೋವಿಡ್ ಪಾಸಿಟಿವಿಟಿ ದರ ಶೇ.2.98. ವಾರದ ಪಾಸಿಟಿವಿಟಿ ರೇಟ್ ಶೇ.2.57. ಚೇತರಿಕೆ ಪ್ರಮಾಣ ಶೇ.98.67ರಷ್ಟಿದೆ.
ಇದನ್ನೂ ಓದಿ:LPG Cylinder Price: ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ 91 ರೂ. ಇಳಿಕೆ
ದೇಶದಲ್ಲಿ ಈವರೆಗೆ 4,44,36,339 ಜನರಿಗೆ ಸೋಂಕು ತಗುಲಿದ್ದು ಒಟ್ಟು 5,27,911 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ 88.61ಕೋಟಿ ಕೋವಿಡ್ ಪರೀಕ್ಷೆ ನಡೆಸಲಾಗಿದೆ. 212.52 ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ.
ಚೀನಾದಲ್ಲಿ ಹೆಚ್ಚುತ್ತಿರುವ ಕೋವಿಡ್: ಚೀನಾದ ಚೆಂಗ್ಡು ಪ್ರದೇಶದಲ್ಲಿ ಕೋವಿಡ್ ಹೆಚ್ಚುತ್ತಿದ್ದು ಇಂದಿನಿಂದ ಭಾನುವಾರದವರೆಗೆ ಆರೋಗ್ಯ ಇಲಾಖೆ ಸಾಮೂಹಿಕ ಕೋವಿಡ್ -19 ಪರೀಕ್ಷೆ ನಡೆಸಲಿದೆ. ಸಿಚುವಾನ್‌ನಲ್ಲಿ ಸಂಜೆ 6 ರಿಂದ ಜನರು ಮನೆಯಲ್ಲಿಯೇ ಇರುವಂತೆ ಆದೇಶಿಸಲಾಗಿದೆ. ಆದರೆ ದೈನಂದಿನ ಅಗತ್ಯತೆಗಳಿಗಾಗಿ ಹೊರ ಬರಬೇಕಾದರೆ ಒಂದು ಕುಟುಂಬಕ್ಕೆ ಒಬ್ಬ ವ್ಯಕ್ತಿಯನ್ನು ಕಳುಹಿಸಲು ಅನುಮತಿಸಲಾಗಿದೆ.