ಕರ್ನಾಟಕ

karnataka

ETV Bharat / bharat

ದೇಶದಲ್ಲಿ 3,324 ಹೊಸ ಕೋವಿಡ್‌ ಪ್ರಕರಣ ಪತ್ತೆ, 40 ಮಂದಿ ಸಾವು - ದೇಶದ ಕೋವಿಡ್​​ ವರದಿ

ದೇಶಾದ್ಯಂತ ಕಳೆದೊಂದು ದಿನದಲ್ಲಿ ವರದಿಯಾದ ಕೋವಿಡ್‌-19 ಸೋಂಕು ಪ್ರಕರಣಗಳ ಸಂಕ್ಷಿಪ್ತ ವಿವರ ಇಲ್ಲಿದೆ.

India Covid Report
ಸಾಂದರ್ಭಿಕ ಚಿತ್ರ

By

Published : May 1, 2022, 11:08 AM IST

Updated : May 1, 2022, 12:11 PM IST

ನವದೆಹಲಿ:ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 3,324 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಒಟ್ಟು ಪ್ರಕರಣಗಳ ಸಂಖ್ಯೆ 4,30,79,188ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಶನಿವಾರ ದಾಖಲಾದ ಪ್ರಕರಣಗಳ ಸಂಖ್ಯೆಗೆ (3,688) ಹೋಲಿಸಿದರೆ ಇಂದು ಶೇ 10ರಷ್ಟು ಇಳಿಮುಖವಾಗಿವೆ.

ದೇಶದಲ್ಲಿ ದೈನಂದಿನ ಪಾಸಿಟಿವಿಟಿ ದರ ಶೇ.0.71 ರಷ್ಟಿದೆ. 19,092 ಸಕ್ರಿಯ ಪ್ರಕರಣಗಳಿವೆ. ಶನಿವಾರ 40 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಮೃತರ ಸಂಖ್ಯೆ 5,23,843ಕ್ಕೆ ತಲುಪಿದೆ. ಚೇತರಿಕೆ ಪ್ರಮಾಣ 98.74 ರಷ್ಟಿದೆ.

ನಿನ್ನೆ 2,876 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಈವರೆಗೆ ಒಟ್ಟು 4,25,36,253 ಮಂದಿ ಗುಣಮುಖರಾಗಿದ್ದಾರೆ. ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಅಡಿ ನಿರ್ವಹಿಸಲಾದ ಒಟ್ಟು ಲಸಿಕೆಯ ಡೋಸ್​ಗಳ ಸಂಖ್ಯೆ 189.17 ಕೋಟಿ ಆಗಿದೆ.

ಇದನ್ನೂ ಓದಿ:22 ದಿನದ ಬಳಿಕ ಕೋವಿಡ್​ಗೆ ಇಬ್ಬರು ಬಲಿ; 126 ಮಂದಿಗೆ ಸೋಂಕು ದೃಢ..‌

Last Updated : May 1, 2022, 12:11 PM IST

ABOUT THE AUTHOR

...view details