ಕರ್ನಾಟಕ

karnataka

ETV Bharat / bharat

Covid Updates : ದೇಶದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಶೇ.90ರಷ್ಟು ಹೆಚ್ಚಳ - ಭಾರತದ ಕೋವಿಡ್​​ ವರದಿ

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಪತ್ತೆಯಾದ ಕೊರೊನಾ ಪ್ರಕರಣಗಳ ಮಾಹಿತಿ ಇಲ್ಲಿದೆ ನೋಡಿ..

India covid update
ಭಾರತದ ಕೋವಿಡ್​​ ಅಪ್ಡೇಟ್​​

By

Published : Apr 18, 2022, 1:08 PM IST

ನವದೆಹಲಿ :ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,183 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಪ್ರಕರಣಗಳ ಸಂಖ್ಯೆಯಲ್ಲಿ ಸುಮಾರು ಶೇ. 90ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇನ್ನು ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 4,30,44,280ಕ್ಕೆ ಏರಿಕೆಯಾಗಿದೆ.

ಭಾನುವಾರ 1,150 ಕೋವಿಡ್ ಪ್ರಕರಣಗಳು ದಾಖಲಾಗಿದ್ದವು. ನಿನ್ನೆ ಒಂದೇ ದಿನ 214 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 5,21,965ಕ್ಕೆ ಏರಿದೆ. ದೈನಂದಿನ ಪಾಸಿಟಿವಿ ದರ ಶೇ. 0.83 ಮತ್ತು ಸಾಪ್ತಾಹಿಕ ಪಾಸಿಟಿವಿ ದರ ಶೇ.32ರಷ್ಟಿದೆ. ರಾಷ್ಟ್ರೀಯ ಕೋವಿಡ್​​ ಚೇತರಿಕೆ ದರ ಶೇ.98.76 ರಷ್ಟಿದೆ.

ದೇಶದಲ್ಲಿ 11,542 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ 1,985 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಈವರೆಗೆ 4,25,10,773 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಮತ್ತೊಂದೆಡೆ ದೇಶದಲ್ಲಿ ಲಸಿಕೆ ನೀಡುವ ಕಾರ್ಯ ಮುಂದುವರೆದಿದೆ. ರಾಷ್ಟ್ರವ್ಯಾಪಿ ಇದುವರೆಗೆ ಒಟ್ಟು 186.52 ಕೋಟಿ ಲಸಿಕಾ ಡೋಸ್​ ನೀಡಲಾಗಿದೆ.

ಇದನ್ನೂ ಓದಿ:ಚೀನಾದಲ್ಲಿ ಪತ್ತೆಯಾಗಿರುವ XE ರೂಪಾಂತರಿ ವೇಗವಾಗಿ ಹರಡುತ್ತದೆ : ದಕ್ಷಿಣ ಕನ್ನಡ ಡಿಹೆಚ್ಒ

ABOUT THE AUTHOR

...view details