ನವದೆಹಲಿ:ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,37,704 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಶನಿವಾರಕ್ಕಿಂತ 9,550 ಕಡಿಮೆ ಸೋಂಕಿತರು ಕಂಡುಬಂದಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಕಳೆದ 24 ಗಂಟೆಯಲ್ಲಿ 488 ಮಂದಿ ಕೋವಿಡ್ಗೆ ಬಲಿಯಾಗಿದ್ದು, 2,42,676 ಮಂದಿ ಕೋವಿಡ್ನಿಂದ ಚೇತರಿಕೆ ಕಂಡಿದ್ದಾರೆ. ದಿನವೊಂದರಲ್ಲಿ ಸೋಂಕು ಪರೀಕ್ಷೆ ಮಾಡಿಸಿಕೊಳ್ಳುವವರ ಪೈಕಿ ಸುಮಾರು ಶೇಕಡಾ 17.22ರಷ್ಟು ಮಂದಿಯಲ್ಲಿ ಸೋಂಕು ಕಂಡುಬರುತ್ತಿದೆ.
ಈವರೆಗೆ ಒಟ್ಟು 3,65,60,650 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಗುಣಮುಖರಾಗಿರುವವರ ಪ್ರಮಾಣ ಶೇಕಡಾ 93.18ರಷ್ಟಿದೆ ಎಂದು ಆರೋಗ್ಯ ಇಲಾಖೆಯ ಅಂಕಿ - ಅಂಶಗಳು ದೃಢಪಡಿಸಿವೆ.ಈವರೆಗೆ ದೇಶದಲ್ಲಿ ಸುಮಾರು 4,89,409 ಮಂದಿ ಮೃತಪಟ್ಟಿದ್ದಾರೆ.