ಕರ್ನಾಟಕ

karnataka

ETV Bharat / bharat

ದೇಶದಲ್ಲಿ ಹೊಸದಾಗಿ 8,306 ಕೋವಿಡ್‌​​ ಕೇಸ್​​ ಪತ್ತೆ : 21ಕ್ಕೇರಿದ Omicron ಸೋಂಕಿತರ ಸಂಖ್ಯೆ - ಕೊರೊನಾ ಅಪ್ಡೇಟ್​​

ಪಾಸಿಟಿವಿಟಿ ದರ ಶೇ.0.94ರಷ್ಟಿದೆ. ಜನವರಿ 16ರಿಂದ ದೇಶಾದ್ಯಂತ ಕೋವಿಡ್‌ ಲಸಿಕಾ ಅಭಿಯಾನ ಆರಂಭಿಸಲಾಗಿದೆ. ಈವರೆಗೆ 127.93 ಕೋಟಿಗೂ ಅಧಿಕ ಡೋಸ್ ವ್ಯಾಕ್ಸಿನ್​ ನೀಡಲಾಗಿದೆ..

India Covid report
ಸಾಂದರ್ಭಿಕ ಚಿತ್ರ

By

Published : Dec 6, 2021, 11:28 AM IST

ನವದೆಹಲಿ :ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 8,306ಮಂದಿ ಹೊಸ ಕೋವಿಡ್​​ ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 3,464,1561ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ದೇಶದಲ್ಲಿ ಸದ್ಯಕ್ಕೆ ಒಟ್ಟು 98,416 ಸಕ್ರಿಯ ಪ್ರಕರಣಗಳಿವೆ. ಕಳೆದ 18 ತಿಂಗಳುಗಳಲ್ಲಿ ಇದು ಕಡಿಮೆಯಾಗಿದೆ. ಇದರ ಜತೆಗೆ, ನಿನ್ನೆ 211 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸಾವಿನ ಸಂಖ್ಯೆ 4,73,537ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ 8,834 ಜನರು ವೈರಸ್‌ನಿಂದ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.98.35 ರಷ್ಟಿದೆ. ಈವರೆಗೆ ದೇಶದಲ್ಲಿ ಕೋವಿಡ್‌ನಿಂದ ಚೇತರಿಸಿಕೊಂಡವರ ಸಂಖ್ಯೆ 34,069,608ಕ್ಕೆ ಏರಿಕೆಯಾಗಿದೆ.

ಪಾಸಿಟಿವಿಟಿ ದರ ಶೇ.0.94ರಷ್ಟಿದೆ. ಜನವರಿ 16ರಿಂದ ದೇಶಾದ್ಯಂತ ಕೋವಿಡ್‌ ಲಸಿಕಾ ಅಭಿಯಾನ ಆರಂಭಿಸಲಾಗಿದೆ. ಈವರೆಗೆ 127.93 ಕೋಟಿಗೂ ಅಧಿಕ ಡೋಸ್ ವ್ಯಾಕ್ಸಿನ್​ ನೀಡಲಾಗಿದೆ.

21ಕ್ಕೇರಿದ ಒಮಿಕ್ರಾನ್​​ ಸೋಂಕಿತರ ಸಂಖ್ಯೆ :ಮಹಾರಾಷ್ಟ್ರ, ರಾಜಸ್ಥಾನ ಮತ್ತು ದೆಹಲಿಯಲ್ಲಿನ ಹೊಸ ಪ್ರಕರಣಗಳು ಸೇರಿ ಭಾರತದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ ಏರುತ್ತಿದೆ. ಮಹಾರಾಷ್ಟ್ರದಲ್ಲಿ 7, ಜೈಪುರದಲ್ಲಿ 9 ಮತ್ತು ದೆಹಲಿಯಲ್ಲಿ 1 ಪ್ರಕರಣ ಸೇರಿ ಒಟ್ಟು ಪ್ರಕರಣಗಳ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.

ನ.25ರಂದು ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಒಮಿಕಾನ್​​ ಪತ್ತೆಯಾಗಿತ್ತು. ಒಮಿಕ್ರಾನ್ ರೂಪಾಂತರ ಡೆಲ್ಟಾ ಮತ್ತು ಬೀಟಾ ರೂಪಾಂತರಗಳಿಗೆ ಹೋಲಿಸಿದರೆ ಮರು ಸೋಂಕಿನ ಹೆಚ್ಚಿನ ಅಪಾಯವನ್ನು ಹೊಂದಿದೆ ಎಂದು ಸಿಂಗಾಪುರದ ಆರೋಗ್ಯ ಸಚಿವಾಲಯ ಹೇಳಿದೆ.

ಇದನ್ನೂ ಓದಿ:ದೆಹಲಿಯಲ್ಲಿ ಮೊದಲ ಒಮಿಕ್ರಾನ್​ ಕೇಸ್​ ಪತ್ತೆ: ಭಾರತದಲ್ಲಿ ಒಟ್ಟು 5 ಮಂದಿಗೆ ಹೊಸ ರೂಪಾಂತರಿ

ABOUT THE AUTHOR

...view details