ಕರ್ನಾಟಕ

karnataka

ETV Bharat / bharat

ನಿನ್ನೆ ದೇಶದಲ್ಲಿ 490 ಮಂದಿ ಕೋವಿಡ್​ಗೆ ಬಲಿ: ಗುಣಮುಖರ ಪ್ರಮಾಣ ಶೇ.97.45ಕ್ಕೆ ಏರಿಕೆ - ಭಾರತದ ಕೊರೊನಾ ಹೋರಾಟ

ದೇಶದ ಒಟ್ಟು ಕೋವಿಡ್​ ಪ್ರಕರಣಗಳ ಸಂಖ್ಯೆ 3,20,77,706ಕ್ಕೆ ಏರಿಕೆಯಾಗಿದೆ. ಆದರೆ ಇವರಲ್ಲಿ 3,12,60,050 ಮಂದಿ ಮಾರಣಾಂತಿಕ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಬಂದಿದ್ದಾರೆ.

India reports 41,195 new cases & 490 deaths in the last 24 hours
ನಿನ್ನೆಯೂ ದೇಶದಲ್ಲಿ 490 ಮಂದಿ ಕೋವಿಡ್​ಗೆ ಬಲಿ

By

Published : Aug 12, 2021, 10:26 AM IST

ನವದೆಹಲಿ:ಕಳೆದೆರಡು ದಿನಗಳ ಹಿಂದೆ 28 ಹಾಗೂ 38 ಸಾವಿರ ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 41,195 ಕೇಸ್​ಗಳು ವರದಿಯಾಗಿವೆ. ಮೃತರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ.

ಬುಧವಾರ ಒಂದೇ ದಿನ 490 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಭಾರತದಲ್ಲೀಗ ಒಟ್ಟು ಕೋವಿಡ್​ ಪ್ರಕರಣಗಳ ಸಂಖ್ಯೆ 3,20,77,706ಕ್ಕೆ ಏರಿಕೆಯಾಗಿದೆ.

ಶೇ.97.45ರಷ್ಟು ಮಂದಿ ಗುಣಮುಖ

ಇಲ್ಲಿಯವರೆಗೆ 3,12,60,050 ಮಂದಿ ಮಾರಣಾಂತಿಕ ಸೋಂಕಿನಿಂದ ಗುಣಮುಖರಾಗಿದ್ದಾರೆ. ದೇಶದ ಚೇತರಿಕೆ ಪ್ರಮಾಣ ಶೇ.97.45ಕ್ಕೆ ಹೆಚ್ಚಳವಾಗಿದೆ. ಉಳಿದಂತೆ 3,87,987 ಪ್ರಕರಣಗಳು ಮಾತ್ರ ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: 26 ದಿನಗಳಿಂದ ದೇಶದಲ್ಲಿ ಬದಲಾಗದ ಪೆಟ್ರೋಲ್​-ಡೀಸೆಲ್​ ಬೆಲೆ: ಮಹಾನಗರಗಳ ಲೀ. ತೈಲ ಬೆಲೆ ಹೀಗಿದೆ..

52.36 ಕೋಟಿ ಡೋಸ್​ ವ್ಯಾಕ್ಸಿನೇಷನ್​

ಜನವರಿಯಿಂದ ದೇಶಾದ್ಯಂತ ಕೋವಿಡ್​ ವ್ಯಾಕ್ಸಿನೇಷನ್​ ಅಭಿಯಾನ ಆರಂಭವಾಗಿದ್ದು, ಇಲ್ಲಿಯವರೆಗೆ ಒಟ್ಟು 52.36 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿದೆ. ಈ ಪೈಕಿ 18 ರಿಂದ 44 ವರ್ಷದವರಿಗೆ 19.79 ಕೋಟಿ ಡೋಸ್​ ವ್ಯಾಕ್ಸಿನ್​ ಹಾಕಲಾಗಿದೆ.

ABOUT THE AUTHOR

...view details