ಕರ್ನಾಟಕ

karnataka

ETV Bharat / bharat

ಇಂದೂ ಕೋವಿಡ್​ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ.. ಒಟ್ಟಾರೆ ಸಾವಿನ ಸಂಖ್ಯೆ 5ಲಕ್ಷಕ್ಕೆ ಏರಿಕೆ! - 1,072ಮಂದಿ ಸೋಂಕಿಗೆ ಬಲಿ

ಸದ್ಯಕ್ಕೆ ದೇಶದಲ್ಲಿ 14,35,569 ಕೊರೊನಾ ಸಕ್ರಿಯ ಪ್ರಕರಣಗಳಿದ್ದು, ದೈನಂದಿನ ಕೋವಿಡ್​ ಪಾಸಿಟಿವಿಟಿ ರೇಟ್ ಶೇ 9.27ಕ್ಕೆ ಇಳಿಕೆ ಕಂಡಿದೆ.

India covid report today
India covid report today

By

Published : Feb 4, 2022, 9:27 AM IST

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಂದೂ ಕೂಡಾ ಇಳಿಕೆ ಕಂಡು ಬಂದಿದ್ದು, ಕಳೆದ 24 ಗಂಟೆಗಳಲ್ಲಿ 1,49,394 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಬರೋಬ್ಬರಿ 1,072ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸಾವಿನ ಪ್ರಮಾಣ ಮಾತ್ರ ಇಳಿಕೆ ಕಾಣುತ್ತಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕಳೆದ 24 ಗಂಟೆಯಲ್ಲಿ 2,46,674 ಮಂದಿ ಕೋವಿಡ್​​ನಿಂದ ಚೇತರಿಕೆ ಕಂಡಿದ್ದಾರೆ. ಸದ್ಯಕ್ಕೆ ದೇಶದಲ್ಲಿ 14,35,569 ಕೊರೊನಾ ಸಕ್ರಿಯ ಪ್ರಕರಣಗಳಿದ್ದು, ದೈನಂದಿನ ಕೋವಿಡ್​ ಪಾಸಿಟಿವಿಟಿ ರೇಟ್ ಶೇ 9.27ಕ್ಕೆ ಇಳಿಕೆ ಕಂಡಿದೆ.

ಆದರೆ ಒಟ್ಟಾರೆ ಸಾವಿನ ಸಂಖ್ಯೆ 5 ಲಕ್ಷಕ್ಕೆ ಏರಿಕೆಯಾಗಿದೆ(Death toll: 5,00,055 )

ಇದನ್ನೂ ಓದಿ:ಅಕ್ರಮ ಗಣಿಗಾರಿಕೆ ಆರೋಪ ಪ್ರಕರಣ: ಇಡಿಯಿಂದ ಪಂಜಾಬ್‌ ಸಿಎಂ ಚನ್ನಿ ಸೋದರಳಿಯ ಭೂಪಿಂದರ್ ಸಿಂಗ್ ಹನಿ ಬಂಧನ

ವ್ಯಾಕ್ಸಿನೇಷನ್​: ಭಾರತದ ದೈನಂದಿನ ಪ್ರಕರಣಗಳು 2 ಲಕ್ಷಕ್ಕಿಂತ ಕಡಿಮೆ ಕಂಡುಬರುತ್ತಿದ್ದು, ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ಈವರೆಗೆ ಸುಮಾರು 1,68,47,16,068(168.47 crore) ಕೋಟಿ ಡೋಸ್​ ವ್ಯಾಕ್ಸಿನೇಷನ್ ನೀಡಲಾಗಿದೆ.

ABOUT THE AUTHOR

...view details