ನವದೆಹಲಿ:ದೇಶದಲ್ಲಿ ಹೊಸದಾಗಿ ಕಾಣಿಸಿಕೊಳ್ಳುವ ಕೊರೊನಾ ಸೋಂಕಿತರ ಸಂಖ್ಯೆ ಕೆಲವು ದಿನಗಳಿಂದ ಎರಡೂವರೆ ಲಕ್ಷದ ಆಸುಪಾಸಿನಲ್ಲಿಯೇ ಇದ್ದು, ಕಳೆದ 24 ಗಂಟೆಯಲ್ಲಿ ಕೊಂಚ ಏರಿಕೆ ಕಾಣುವ ಮೂಲಕ 2,82,970 ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಲಾಖೆ ಮಾಹಿತಿ ನೀಡಿದೆ.
ಹಿಂದಿನ ದಿನಕ್ಕೆ ಹೋಲಿಸಿದರೆ, ಕಳೆದ 24 ಗಂಟೆಗಳಲ್ಲಿ ನಿನ್ನೆಗಿಂತ ಹೆಚ್ಚಿನ ಸೋಂಕಿತರು ಇಂದು ಪತ್ತೆಯಾಗಿದ್ದಾರೆ. ಒಂದು ದಿನದಲ್ಲಿ 441 ಮಂದಿ ಕೋವಿಡ್ನಿಂದ ಸಾವನ್ನಪ್ಪಿದ್ದು, 1,88,157 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 3,55,83,039 ಮಂದಿ ಗುಣಮುಖರಾಗಿದ್ದಾರೆ.