ನವದೆಹಲಿ: ಭಾರತದಲ್ಲಿ ಹೊಸದಾಗಿ 30,256 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 33,478,419ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 295 ಸೋಂಕಿತರು ಮೃತಪಟ್ಟಿದ್ದು, ಈವರೆಗೆ 4,45,133 ಮಂದಿ ವೈರಸ್ಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ನಿನ್ನೆ 43,938 ಮಂದಿ ಗುಣಮುಖರಾಗಿದ್ದು, ಈವರೆಗೆ 3,27,15,105 ಜನರು ಕೋವಿಡ್ನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ ದೇಶದಲ್ಲಿ 3,18,181 ಕೊರೊನಾ ಕೇಸ್ಗಳು ಸಕ್ರಿಯವಾಗಿವೆ. ಸೆಪ್ಟೆಂಬರ್ 19 ರಂದು 37,78,296 ಕೋವಿಡ್ ವ್ಯಾಕ್ಸಿನ್ ಡೋಸ್ಗಳನ್ನು ಹಾಕಲಾಗಿದ್ದು, ಒಟ್ಟಾರೆಯಾಗಿ 80,85,68,144 ಲಸಿಕಾ ಡೋಸ್ಗಳನ್ನು ನೀಡಲಾಗಿದೆ.