ಕರ್ನಾಟಕ

karnataka

ETV Bharat / bharat

India Corona: ದೇಶದಲ್ಲಿ ಹೊಸದಾಗಿ 796 ಸೋಂಕಿತರು ಪತ್ತೆ, 19ಸಾವು - ಭಾರತದಲ್ಲಿ ಕೊರೊನಾ ಸೋಂಕಿತರು

ಭಾರತದ ಕೊರೊನಾ ಸೋಂಕಿತರ ಸಂಖ್ಯೆ ಸ್ವಲ್ಪ ಇಳಿಮುಖವಾಗಿದ್ದು, ಒಟ್ಟು ಸೋಂಕಿತರಲ್ಲಿ ಶೇಕಡಾ 0.03ರಷ್ಟು ಸಕ್ರಿಯ ಪ್ರಕರಣಗಳಿವೆ. ಸೋಂಕಿನಿಂದ ಚೇತರಿಕೆ ಕಂಡಿರುವವರ ಪ್ರಮಾಣ ಶೇಕಡಾ 98.76ರಷ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

covid-19-india-logs-796-new-cases-19-deaths
India Corona: ದೇಶದಲ್ಲಿ ಹೊಸದಾಗಿ 796 ಸೋಂಕಿತರು ಪತ್ತೆ, 19 ಮೃತ

By

Published : Apr 12, 2022, 10:48 AM IST

ನವದೆಹಲಿ: ದೇಶದಲ್ಲಿ ಹೊಸದಾಗಿ 796 ಹೊಸ ಕೊರೊನಾ ವೈರಸ್ ಸೋಂಕುಗಳು ದಾಖಲಾಗಿದ್ದು, ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 4,30,36,928ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳು 10,889ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳು ಮಂಗಳವಾರ ಮಾಹಿತಿ ನೀಡಿವೆ. 24 ಗಂಟೆಯ ಅವಧಿಯಲ್ಲಿ 19 ಮಂದಿ ಕೋವಿಡ್ ಕಾರಣಕ್ಕೆ ಸಾವನ್ನಪ್ಪಿದ್ದಾರೆ.

ದೇಶದಲ್ಲಿ ಈವರೆಗೆ ಕೋವಿಡ್​ನಿಂದ ಮೃತಪಟ್ಟವರ ಸಂಖ್ಯೆ 5,21,710ಕ್ಕೆ ಏರಿಕೆಯಲ್ಲಿ ಅಂಕಿ ಅಂಶಗಳಲ್ಲಿ ಉಲ್ಲೇಖಿಸಲಾಗಿದೆ. ಒಟ್ಟು ಸೋಂಕಿತರಲ್ಲಿ ಶೇಕಡಾ 0.03ರಷ್ಟು ಸಕ್ರಿಯ ಪ್ರಕರಣಗಳಿವೆ. ಸೋಂಕಿನಿಂದ ಚೇತರಿಕೆ ಕಂಡಿರುವವರ ಪ್ರಮಾಣ ಶೇಕಡಾ 98.76ರಷ್ಟಿದೆ. 24 ಗಂಟೆಗಳಲ್ಲಿ 169 ಕೋವಿಡ್ ಸಕ್ರಿಯ ಸೋಂಕಿತರ ಕಡಿಮೆಯಾಗಿದೆ.

ಭಾರತದ ಕೋವಿಡ್ ಸೋಂಕಿತರ ಸಂಖ್ಯೆ ಆಗಸ್ಟ್ 7, 2020ರಂದು 20 ಲಕ್ಷದ ಗಡಿಯನ್ನು ದಾಟಿತ್ತು. ಆಗಸ್ಟ್ 23ರಂದು 30 ಲಕ್ಷ, ಸೆಪ್ಟೆಂಬರ್ 5ರಂದು 40 ಲಕ್ಷ ಮತ್ತು ಸೆಪ್ಟೆಂಬರ್ 16ರಂದು 50 ಲಕ್ಷ, ಇದು ಸೆಪ್ಟೆಂಬರ್ 28 ರಂದು 60ಲಕ್ಷ, ಅಕ್ಟೋಬರ್ 11ರಂದು 70 ಲಕ್ಷ, ಅಕ್ಟೋಬರ್ 29ರಂದು 80 ಲಕ್ಷ, ನವೆಂಬರ್ 20ರಂದು 90 ಲಕ್ಷ ಮತ್ತು ಡಿಸೆಂಬರ್ 19ರಂದು ಒಂದು ಕೋಟಿ ಗಡಿ ದಾಟಿದೆ. ದೇಶವು ಕಳೆದ ವರ್ಷ ಮೇ 4ರಂದು ಎರಡು ಕೋಟಿ ಮತ್ತು ಜೂನ್ 23ರಂದು ಮೂರು ಕೋಟಿ ದಾಟಿತ್ತು.

ಇದನ್ನೂ ಓದಿ:ದಿಯೋಘರ್​ ದುರಂತ.. ರಕ್ಷಣಾ ಕಾರ್ಯಾಚರಣೆ ವೇಳೆ ಸಾವು-ನೋವು

ABOUT THE AUTHOR

...view details