ಹೈದರಾಬಾದ್ : ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 38,628 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 40,017 ಮಂದಿ ಗುಣಮುಖರಾಗಿದ್ದಾರೆ ಮತ್ತು 617 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಇದುವರೆಗೆ ದಾಖಲಾದ ಒಟ್ಟು ಪ್ರಕರಣ ಸಂಖ್ಯೆ 3,18,95, 286 ಆಗಿದೆ. ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 4,12,153 ಇದ್ದು, ಇದುವರೆಗೆ 3,10,55,861 ಮಂದಿ ಸೋಂಕು ಮುಕ್ತರಾಗಿದ್ದಾರೆ. 4,27,371 ಮಂದಿ ಮೃತಪಟ್ಟಿದ್ದಾರೆ.
ಕಳೆದ 24 ಗಂಟೆಯಲ್ಲಿ 49,55,138 ಮಂದಿಗೆ ಲಸಿಕೆ ನೀಡಲಾಗಿದೆ. ಇದುವರೆಗೆ ಒಟ್ಟು 50,10,09,609 ಮಂದಿ ಲಸಿಕೆ ಪಡೆದಿದ್ದಾರೆ.
ಪ್ರಸ್ತುತ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ. 1.29 ರಷ್ಟಿದೆ. ವಾರದ ಪಾಸಿಟಿವ್ ಪ್ರಕರಣಗಳ ದರ ಶೇ. 5ಕ್ಕಿಂತ ಕಡಿಮೆಯಿದ್ದು, ಪ್ರಸ್ತುತ ಶೇ. 2.39 ರಷ್ಟಿದೆ. ಪ್ರಸ್ತುತ ಪ್ರತಿದಿನದ ಪಾಸಿಟಿವ್ ಪ್ರಕರಣಗಳ ದರ ಶೇ. 2.21 ರಷ್ಟಿದ್ದು, ಕಳೆದ 12 ದಿನಗಳಲ್ಲಿ ಶೇ. 3ಕ್ಕಿಂತ ಕಡಿಮೆಯಿದೆ.
ಪರೀಕ್ಷಾ ಪ್ರಮಾಣ ಕೂಡ ಹೆಚ್ಚಳ ಮಾಡಲಾಗಿದ್ದು, ಇದುವರೆಗೆ 47.83 ಕೋಟಿ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.