ನವದೆಹಲಿ: ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 35,499 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 39,686ಮಂದಿ ಮಾರಕ ಸೋಂಕಿನಿಂದ ಗುಣಮುಖರಾಗಿದ್ದಾರೆ. 447 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ದೇಶದಲ್ಲಿ ತಗ್ಗಿದ ಕೋವಿಡ್: 35,499 ಹೊಸ ಸೋಂಕಿತರು ಪತ್ತೆ - ಹೊಸ ಕೊರೊನಾ ಪ್ರಕರಣ ಪತ್ತೆ
ದೇಶದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತು ಸಾವಿನ ಸಂಖ್ಯೆ ನಿನ್ನೆಗಿಂತ ಇಂದು ಕಡಿಮೆಯಾಗಿದೆ. ಪ್ರಸ್ತುತ 4,02,188 ಸಕ್ರಿಯ ಪ್ರಕರಣಗಳಿವೆ.
Covid-19 Update
ಇದುವರೆಗೆ ದಾಖಲಾದ ಒಟ್ಟು ಪ್ರಕರಣ ಸಂಖ್ಯೆ3,19,69,954 ಆಗಿದೆ. ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 4,02,188 ಇದೆ. ಇದುವರೆಗೆ 3,11,39,457 ಮಂದಿ ಸೋಂಕು ಮುಕ್ತರಾಗಿದ್ದಾರೆ. 4,28,309 ಮಂದಿ ಮೃತಪಟ್ಟಿದ್ದಾರೆ.
ಕಳೆದ 24 ಗಂಟೆಯಲ್ಲಿ 16,11,590 ಮಂದಿಗೆ ಲಸಿಕೆ ನೀಡಲಾಗಿದೆ. ಇದುವರೆಗೆ ಒಟ್ಟು 52,40,60,890 ಮಂದಿ ಲಸಿಕೆ ಪಡೆದಿದ್ದಾರೆ.