ಕರ್ನಾಟಕ

karnataka

ETV Bharat / bharat

ನಿನ್ನೆ ದೇಶದಲ್ಲಿ 38,948 ಮಂದಿಗೆ ಅಂಟಿದ ಕೊರೊನಾ..ಕೇರಳದಲ್ಲೇ 26,701 ಕೇಸ್​ ಪತ್ತೆ - ಕೇರಳ

ಭಾರತದಲ್ಲಿ ಇಲ್ಲಿಯವರೆಗೆ ಒಟ್ಟು 3,30,27,621 ಮಂದಿಗೆ ವೈರಸ್​ ಅಂಟಿದ್ದು, ಇವರಲ್ಲಿ 3,21,81,995 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ.

ನಿನ್ನೆ ದೇಶದಲ್ಲಿ 38,948 ಮಂದಿಗೆ ಅಂಟಿದ ಕೊರೊನಾ
ನಿನ್ನೆ ದೇಶದಲ್ಲಿ 38,948 ಮಂದಿಗೆ ಅಂಟಿದ ಕೊರೊನಾ

By

Published : Sep 6, 2021, 11:03 AM IST

ನವದೆಹಲಿ:ದೇಶದಲ್ಲಿ ನಿನ್ನೆ ಒಂದೇ ದಿನ 38,948 ಮಂದಿ ಕೋವಿಡ್​ ಸೋಂಕಿತರು ಪತ್ತೆಯಾಗಿದ್ದು, 219 ಸೋಂಕಿತರು ಬಲಿಯಾಗಿದ್ದಾರೆ. ಈ ಪೈಕಿ ಕೇರಳದಲ್ಲೇ ಸಿಂಹಪಾಲು ಇದ್ದು, ಅಲ್ಲಿ 26,701 ಕೇಸ್​ಗಳು ಹಾಗೂ 74 ಸಾವು ವರದಿಯಾಗಿದೆ.

ಗುಣಮುಖರ ಪ್ರಮಾಣ ಶೇ.97.44ಕ್ಕೆ ಏರಿಕೆ

ಭಾರತದಲ್ಲಿ ಇಲ್ಲಿಯವರೆಗೆ ಒಟ್ಟು 3,30,27,621 ಮಂದಿಗೆ ವೈರಸ್​ ಅಂಟಿದಂತಾಗಿದ್ದು, ಮೃತರ ಸಂಖ್ಯೆ 4,40,752ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ ಶೇ.97.44 ರಷ್ಟು ಅಂದರೆ 3,21,81,995 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಉಳಿದಂತೆ 4,04,874 ಕೇಸ್​​ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಭಾರತದಲ್ಲಿ ಆಗಸ್ಟ್ ತಿಂಗಳ ವ್ಯಾಕ್ಸಿನೇಷನ್ ಪ್ರಮಾಣ G7 ರಾಷ್ಟ್ರಗಳಿಗಿಂತಲೂ ಹೆಚ್ಚು..

ಆಗಸ್ಟ್‌ ತಿಂಗಳಿನಲ್ಲಿ ದಾಖಲೆಯ​ ವ್ಯಾಕ್ಸಿನೇಷನ್​ :ಜನವರಿ 16ರಿಂದ ದೇಶಾದ್ಯಂತ ಕೊರೊನಾ ಲಸಿಕಾಭಿಯಾನ ಆರಂಭಿಸಲಾಗಿದ್ದು, ಈವರೆಗೆ 68,75,41,762 ಡೋಸ್​ ವ್ಯಾಕ್ಸಿನ್​ ನೀಡಲಾಗಿದೆ. ಆಗಸ್ಟ್‌ ತಿಂಗಳಿನಲ್ಲಿ ದಾಖಲೆಯ ಮಟ್ಟದಲ್ಲಿ ಭಾರತದಾದ್ಯಂತ ಕೋವಿಡ್​ ಲಸಿಕೆ ನೀಡಲಾಗಿದೆ. ಈ ಪ್ರಮಾಣವು ಎಲ್ಲಾ ಜಿ7 ರಾಷ್ಟ್ರಗಳಿಗಿಂತಲೂ ಹೆಚ್ಚಿದ್ದು, ಜಾಗತಿಕ ಭೂಪಟದಲ್ಲಿ ಭಾರತವು ಮುಂಚೂಣಿಯಲ್ಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ABOUT THE AUTHOR

...view details