ಕರ್ನಾಟಕ

karnataka

ETV Bharat / bharat

ದೇಶದಲ್ಲಿ ಮತ್ತೆ ಕೋವಿಡ್‌ ಹೆಚ್ಚಳ​: 20,557 ಹೊಸ ಸೋಂಕಿತರು ಪತ್ತೆ, 44 ಮಂದಿ ಸಾವು - corona cases

ಭಾರತದಲ್ಲಿ ಕಳೆದೊಂದು ದಿನದಲ್ಲಿ ಕಂಡುಬಂದ ಕೋವಿಡ್ ಪ್ರಕರಣಗಳ ಮಾಹಿತಿ ಇಲ್ಲಿದೆ.

ಕೋವಿಡ್‌
covid

By

Published : Jul 28, 2022, 11:27 AM IST

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 20,557 ಹೊಸ ಕೋವಿಡ್‌ ಕೇಸ್​​​ಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 4,39,59,321 ಕ್ಕೆ ತಲುಪಿದೆ. ಬುಧವಾರ ದಾಖಲಾದ ಕೇಸ್​ಗಳಿಗಿಂತ ಇಂದು 2,244 ಪ್ರಕರಣಗಳು ಹೆಚ್ಚಳವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕಳೆದೊಂದು ದಿನದಲ್ಲಿ ಚಿಕಿತ್ಸೆ ಫಲಕಾರಿಯಾಗದೇ 44 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಈ ಮೂಲಕ ಮೃತಪಟ್ಟವರ ಒಟ್ಟು ಸಂಖ್ಯೆ 5,26,211 ಕ್ಕೆ ತಲುಪಿದೆ. ಸದ್ಯಕ್ಕೆ ದೇಶದಲ್ಲಿ 1,46,323 ಸಕ್ರಿಯ ಪ್ರಕರಣಗಳಿವೆ. 24 ಗಂಟೆಗಳ ಅವಧಿಯಲ್ಲಿ 1,297 ಸಕ್ರಿಯ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ. ಈವರೆಗೆ 4,32,86,787 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ರಾಷ್ಟ್ರೀಯ ಕೋವಿಡ್​​ ಚೇತರಿಕೆ ದರ ಶೇ.98.47 ರಷ್ಟಿದ್ದರೆ, ಸಕ್ರಿಯ ಪ್ರಕರಣ ದರ ಶೇ. 0.33 ಇದೆ. ಸಾವಿನ ಪ್ರಮಾಣ ಶೇ.1.20 ರಷ್ಟಿದೆ.

ರಾಷ್ಟ್ರವ್ಯಾಪಿ ಕೋವಿಡ್-19 ವ್ಯಾಕ್ಸಿನೇಷನ್ ಅಭಿಯಾನದಡಿ ಈವರೆಗೆ 203.21ಕೋಟಿ ಲಸಿಕಾ ಡೋಸ್​ ನೀಡಲಾಗಿದೆ. ನಿನ್ನೆ ಮೃತಪಟ್ಟ 44 ಸೋಂಕಿತರ ಪೈಕಿ ಕೇರಳದಿಂದ 12, ಮಹಾರಾಷ್ಟ್ರದಿಂದ ಎಂಟು, ಪಶ್ಚಿಮ ಬಂಗಾಳದಿಂದ ಐದು, ದೆಹಲಿ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಧ್ಯಪ್ರದೇಶ, ಮಣಿಪುರ ಮತ್ತು ತ್ರಿಪುರದಿಂದ ತಲಾ ಇಬ್ಬರು ಮತ್ತು ಅಸ್ಸಾಂ, ಚಂಡೀಗಢ, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ಒಡಿಶಾ, ಸಿಕ್ಕಿಂ ಮತ್ತು ಮಿಜೋರಾಂನಿಂದ ತಲಾ ಒಬ್ಬರು ಸೇರಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಕಳೆದ 24 ಗಂಟೆಯಲ್ಲಿ 692 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲೆಯಾದ್ಯಂತ ಸಕ್ರಿಯ ಪ್ರಕರಣಗಳ ಸಂಖ್ಯೆ 4074 ಕ್ಕೆ ಏರಿಕೆಯಾಗಿದೆ. ನಿನ್ನೆ ಪತ್ತೆಯಾದ ಹೊಸ ಪ್ರಕರಣಗಳಲ್ಲಿ ಕಾಶ್ಮೀರ ವಿಭಾಗದಿಂದ 431 ಮತ್ತು ಜಮ್ಮು ವಿಭಾಗದಿಂದ 261 ಕೇಸ್​ಗಳು ದೃಢಪಟ್ಟಿವೆ. ಇಬ್ಬರು ಎರಡು ಸಾವನ್ನಪ್ಪಿದ್ದಾರೆ. ಹಾಗೆಯೇ, ಮುಂಬೈನಲ್ಲಿ 283 ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ತೆಲಂಗಾಣದಲ್ಲಿ 852 ಹೊಸ ಪ್ರಕರಣಗಳು ಕಂಡುಬಂದಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 4,915 ಕ್ಕೆ ತಲುಪಿದೆ.

ಇದನ್ನೂ ಓದಿ:ಅವರಿ'ಗೇ' ಮಂಕಿಪಾಕ್ಸ್​ ಅಪಾಯ ಜಾಸ್ತಿ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ABOUT THE AUTHOR

...view details