ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 11,539 ಹೊಸ ಕೋವಿಡ್ 19 ಪ್ರಕರಣಗಳು ದಾಖಲಾಗಿವೆ. 43 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈಗಿನ ಒಟ್ಟು ಚೇತರಿಕೆಯ ಪ್ರಮಾಣ ಶೇ 98.59. ನಿನ್ನೆ 12,783 ಮಂದಿ ಚೇತರಿಸಿಕೊಂಡಿದ್ದಾರೆ. 99,879 ಸಕ್ರಿಯ ಪ್ರಕರಣಗಳಿವೆ. ದೈನಂದಿನ ಪಾಸಿಟಿವಿಟಿ ದರ ಶೇ.3.75. ವಾರದ ಪಾಸಿಟಿವಿಟಿ ದರ ಶೇ. 3.88 ಇದೆ. ರಾಷ್ಟ್ರವ್ಯಾಪಿ ಕೋವಿಡ್ ಲಸಿಕಾಭಿಯಾನದಡಿ ಈವರೆಗೆ 209.67 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.
ಭಾರತದಲ್ಲಿ 11,539 ಹೊಸ ಕೋವಿಡ್ ಕೇಸ್ ಪತ್ತೆ: ಸಕ್ರಿಯ ಪ್ರಕರಣಗಳು 1 ಲಕ್ಷಕ್ಕಿಂತ ಕಡಿಮೆ - Covid 19
ದೇಶದಲ್ಲಿ ಕಳೆದೊಂದು ದಿನದಲ್ಲಿ ಪತ್ತೆಯಾದ ಕೋವಿಡ್ ಪ್ರಕರಣಗಳ ವಿವರ ಹೀಗಿದೆ.

ಸಾಂದರ್ಭಿಕ ಚಿತ್ರ
Last Updated : Aug 21, 2022, 10:41 AM IST