ಕರ್ನಾಟಕ

karnataka

ETV Bharat / bharat

ಭಾರತದಲ್ಲಿ 18,738 ಹೊಸ ಕೋವಿಡ್ ಕೇಸ್​ ಪತ್ತೆ, 40 ಮಂದಿ ಸಾವು - ಕೋವಿಡ್​​ ಪ್ರಕರಣಗಳ ವಿವರ

ದೇಶದಲ್ಲಿ ಕಳೆದೊಂದು ದಿನದಲ್ಲಿ ಪತ್ತೆಯಾದ ಕೋವಿಡ್​​ ಪ್ರಕರಣಗಳ ವಿವರ ಹೀಗಿದೆ.

Covid 19 update
ಸಾಂದರ್ಭಿಕ ಚಿತ್ರ

By

Published : Aug 7, 2022, 10:04 AM IST

ನವದೆಹಲಿ:ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ18,738 ಹೊಸ ಕೋವಿಡ್​​ ಕೇಸ್ ದೃಢಪಟ್ಟಿದ್ದು, 40 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಸದ್ಯ ದೇಶದಲ್ಲಿ 1,34,933 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ 18,558 ಮಂದಿ ಚೇತರಿಸಿಕೊಂಡಿದ್ದು, ಈವರೆಗೆ ಒಟ್ಟು 4,34,84,110 ಮಂದಿ ಗುಣಮುಖರಾಗಿದ್ದಾರೆ.

ಚೇತರಿಕೆ ದರ ಶೇ. 98.50 ರಷ್ಟಿದೆ. ನಿತ್ಯದ ಪಾಸಿಟಿವಿಟಿ ದರ ಶೇ.5.02 ಇದ್ದರೆ, ವಾರದ ಪಾಸಿಟಿವಿಟಿ ದರ 4.63 ಪ್ರತಿಶತವಿದೆ. ರಾಷ್ಟ್ರವ್ಯಾಪಿ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ಅಡಿ ಈವರೆಗೆ 206.21 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಶನಿವಾರ 29,58,617 ಡೋಸ್​ ಲಸಿಕೆ ನೀಡಲಾಗಿದೆ. ಇಂಡಿಯನ್ ಕೌನ್ಸಿಲ್ ಆಫ್​​​ ಮೆಡಿಕಲ್​ ರಿಸರ್ಚ್ ​ಪ್ರಕಾರ, ಆಗಸ್ಟ್ 6 ರವರೆಗೆ ಒಟ್ಟು 87.79 ಕೋಟಿ ಮಂದಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ನಿನ್ನೆ 3,72,910 ಮಂದಿಯ ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಇದನ್ನೂ ಓದಿ:ಮುಖ್ಯಮಂತ್ರಿ ಬೊಮ್ಮಾಯಿಗೆ ಕೋವಿಡ್: ದೆಹಲಿ ಪ್ರವಾಸ ರದ್ದು

ABOUT THE AUTHOR

...view details