ನವದೆಹಲಿ:ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 20,557 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 4,38,03,619ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಸದ್ಯ ದೇಶದಲ್ಲಿ 1,45,654 ಸಕ್ರಿಯ ಪ್ರಕರಣಗಳಿವೆ. ನಿನ್ನೆ 40 ಮಂದಿ ಸೋಂಕಿಗೆ ಬಲಿಯಾಗಿದ್ದು, ಮೃತರ ಸಂಖ್ಯೆ 5,25,825ಕ್ಕೆ ಏರಿದೆ. ರಾಷ್ಟ್ರೀಯ ಕೋವಿಡ್-19 ಚೇತರಿಕೆ ದರ ಶೇ.98.47 ರಷ್ಟಿದ್ದರೆ, ದೈನಂದಿನ ಪಾಸಿಟಿವಿಟಿ ದರ ಶೇ.4.13 ರಷ್ಟಿದೆ.
ಕಳೆದೊಂದು ದಿನದಲ್ಲಿ 18,517 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,31,32,140 ಕ್ಕೇರಿದೆ. ರಾಷ್ಟ್ರವ್ಯಾಪಿ ಕೋವಿಡ್-19 ವ್ಯಾಕ್ಸಿನೇಷನ್ ಅಭಿಯಾನದಡಿ ಈವರೆಗೆ 200.61 ಕೋಟಿ ಲಸಿಕೆ ನೀಡಲಾಗಿದೆ.
ಒಮಿಕ್ರಾನ್ ಏರಿಕೆಗೆ ಕಾರಣವೇನು?:ಜು.19ರಂದು 'ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್' (PNAS) ಜರ್ನಲ್‌ನಲ್ಲಿ ಪ್ರಕಟವಾದ ಒಂದು ಅಧ್ಯಯನವು ಒಮಿಕ್ರಾನ್ ರೂಪಾಂತರಗಳು SARS-CoV-2 ವೈರಸ್ ತರಹದ ಕಣಗಳ ಸೋಂಕನ್ನು ಹೆಚ್ಚಿಸುತ್ತದೆ ಮತ್ತು ಪ್ರತಿಕಾಯ ತಟಸ್ಥೀಕರಣವನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದೆ.
ಸಂಶೋಧಕರು SARS-CoV-2 ಪ್ರೊಟೀನ್‌ಗಳ ರಚನಾತ್ಮಕ ಗುಣಲಕ್ಷಣಗಳನ್ನು ಅನುಕರಿಸುವ ವೈರಸ್ ತರಹದ ಕಣಗಳನ್ನು (VLPs) ಬಳಸಿಕೊಂಡು ಅಧ್ಯಯನ ನಡೆಸಿದ್ದಾರೆ. B.1, B.1.1, ಡೆಲ್ಟಾ ಮತ್ತು ಓಮಿಕ್ರಾನ್ ರೂಪಾಂತರಗಳ VLP(ವೈರಸ್ ತರಹದ ಕಣ)ಗಳನ್ನು ಮತ್ತು ಕೋವಿಡ್-19 ನಿಂದ ಬದುಕುಳಿದವರಿಂದ ಆಂಟಿಸೆರಾ ಮಾದರಿಗಳನ್ನು ಹೋಲಿಕೆ ಮಾಡಿ ಮೌಲ್ಯಮಾಪನ ಮಾಡಲಾಯಿತು. ಇದರಲ್ಲಿ ಲಸಿಕೆ ಪಡೆದ ಮತ್ತು ಲಸಿಕೆ ಹಾಕಿಸಿಕೊಳ್ಳದವರು ಸಹ ಇದ್ದರು.
B.1ಗೆ ವ್ಯತಿರಿಕ್ತವಾಗಿ, ಎರಡು ವ್ಯಾಕ್ಸಿನ್ ಪಡೆದ ಅದೇ ವ್ಯಕ್ತಿಯಿಂದ ಆಂಟಿಸೆರಾ ಒಮಿಕ್ರಾನ್ ಇನ್ ವಿಟ್ರೊವನ್ನು ತಟಸ್ಥಗೊಳಿಸುವಲ್ಲಿ 15 ಪಟ್ಟು ಕಡಿಮೆ ಪರಿಣಾಮಕಾರಿಯಾಗಿದೆ. 16 ರಿಂದ 21 ದಿನಗಳಲ್ಲಿ ಮೂರನೇ ಲಸಿಕೆಯನ್ನು ಪಡೆದವರಲ್ಲಿ ಒಮಿಕ್ರಾನ್ ವಿರುದ್ಧ ಇನ್ ವಿಟ್ರೊ ನ್ಯೂಟ್ರಲೈಸಿಂಗ್ ಚಟುವಟಿಕೆಯು ಸೆರಾದಲ್ಲಿ ಗಣನೀಯವಾಗಿ ಹೆಚ್ಚಾಯಿತು.
ಪ್ರಸ್ತುತ ಲಭ್ಯವಿರುವ ನಾಲ್ಕು ಮೊನೊಕ್ಲೋನಲ್ ಪ್ರತಿಕಾಯ ಚಿಕಿತ್ಸೆಗಳ ಇನ್ ವಿಟ್ರೊ ನ್ಯೂಟ್ರಲೈಸಿಂಗ್ ಸಾಮರ್ಥ್ಯವನ್ನು- ಕ್ಯಾಸಿರಿವಿಮಾಬ್, ಇಮ್ಡೆವಿಮಾಬ್, ಸೊಟ್ರೋವಿಮಾಬ್ ಮತ್ತು ಬೆಬ್ಟೆಲೋವಿಮಾಬ್ ಔಷಧಗಳು ಒಳಗೊಂಡಿವೆ ಎಂದು ಸಂಶೋಧಕರು ಹೇಳಿದ್ದಾರೆ. ಆದರೆ ಒಮಿಕ್ರಾನ್ ವಿರುದ್ಧ ಬೆಬ್ಟೆಲೋವಿಮಾಬ್ ಮಾತ್ರ ಪರಿಣಾಮಕಾರಿ ಎಂದು ಕಂಡುಕೊಂಡಿದ್ದಾರೆ.
ಇದನ್ನೂ ಓದಿ:200 ಕೋಟಿ ಕೋವಿಡ್ ವ್ಯಾಕ್ಸಿನೇಷನ್: ಮೋದಿಗೆ ಬಿಲ್ ಗೇಟ್ಸ್ ಅಭಿನಂದನೆ