ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 15,528 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ನಿನ್ನೆ 25 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 5,25,785ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳು ಇಳಿಕೆ; ಹೊಸ 15,528 ಸೋಂಕಿತರು ಪತ್ತೆ - ಕೋವಿಡ್ 19 ಪ್ರಕರಣಗಳು
ಭಾರತದಲ್ಲಿ ಕಳೆದೊಂದು ದಿನದಲ್ಲಿ ಕಂಡುಬಂದ ಕೋವಿಡ್ ಪ್ರಕರಣಗಳ ವಿವರ ಹೀಗಿದೆ..
ಸಾಂದರ್ಭಿಕ ಚಿತ್ರ
ಸದ್ಯ ದೇಶದಲ್ಲಿ 1,43,654 ಸಕ್ರಿಯ ಪ್ರಕರಣಗಳಿವೆ. ಕಳೆದೊಂದು ದಿನದಲ್ಲಿ 16,113 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,31,13,623ಕ್ಕೇರಿದೆ. ಸಾವಿನ ಪ್ರಮಾಣ ಶೇ.1.20 ರಷ್ಟಿದೆ. ರಾಷ್ಟ್ರೀಯ ಕೋವಿಡ್ ಚೇತರಿಕೆ ದರ ಶೇ. 98.47 ರಷ್ಟಿದೆ. ರಾಷ್ಟ್ರವ್ಯಾಪಿ ಕೋವಿಡ್-19 ವ್ಯಾಕ್ಸಿನೇಷನ್ ಅಭಿಯಾನದಡಿ ಈವರೆಗೆ 200.33 ಕೋಟಿ ಲಸಿಕೆ ನೀಡಲಾಗಿದೆ.
ಇದನ್ನೂ ಓದಿ:ಸ್ಪೇನ್ನಲ್ಲಿ ಬಿಸಿ ಗಾಳಿ ಅಲೆ: ತಾಪಕ್ಕೆ ವಾರದಲ್ಲಿ 510 ಜನರ ಸಾವು