ನವದೆಹಲಿ: ದೇಶದಲ್ಲಿ ಶನಿವಾರ 3,688 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ನಿನ್ನೆ ವರದಿಯಾಗಿದ್ದ 3,377 ಸೋಂಕುಗಳನ್ನು ಬೀಟ್ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇದೇ ಅವಧಿಯಲ್ಲಿ ರಾಷ್ಟ್ರಾದ್ಯಂತ ಒಟ್ಟು 50 ಜನ ಕೋವಿಡ್ಗೆ ತುತ್ತಾಗಿದ್ದು, ಒಟ್ಟು ಸಾವನ್ನಪ್ಪಿದವರ ಸಂಖ್ಯೆ 5,23,803 ಕ್ಕೆ ಏರಿದೆ.
ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 18,684ಕ್ಕೆ ಗಣನೀಯ ಏರಿಕೆ ಕಂಡಿದೆ. ಇದು ದೇಶದ ಒಟ್ಟು ಸಕಾರಾತ್ಮಕ ಪ್ರಕರಣಗಳಲ್ಲಿ 0.04 ಪ್ರತಿಶತದಷ್ಟಿದೆ. ಕಳೆದ 24 ಗಂಟೆಗಳಲ್ಲಿ 2,755 ರೋಗಿಗಳು ಚೇತರಿಸಿಕೊಂಡಿದ್ದು, ಒಟ್ಟು ಚೇತರಿಸಿಕೊಂಡವರ ಸಂಖ್ಯೆ 4,25,33,377 ಕ್ಕೆ ತಲುಪಿದೆ. ಪರಿಣಾಮವಾಗಿ, ಭಾರತದ ಚೇತರಿಕೆ ಪ್ರಮಾಣವು 98.74 ಪ್ರತಿಶತದಷ್ಟಿದೆ.