ಕರ್ನಾಟಕ

karnataka

ETV Bharat / bharat

ಸತತ ಏರಿಕೆ ನಂತರ ಇಳಿದ ಕೊರೊನಾ; ದೇಶದಲ್ಲಿ 13,086 ಹೊಸ ಕೇಸ್

ದೇಶದಲ್ಲಿ ಏರುಗತಿಯಲ್ಲಿದ್ದ ಕೊರೊನಾ ಇಂದು ಅಲ್ಪಪ್ರಮಾಣದಲ್ಲಿ ಇಳಿಕೆ ಕಂಡಿದೆ. ಗುಣಮುಖರ ಸಂಖ್ಯೆ ದುಪ್ಪಟ್ಟಾಗಿದೆ.

ಸತತ ಏರಿಕೆ ನಂತರ ಇಳಿದ ಕೊರೊನಾ
ಸತತ ಏರಿಕೆ ನಂತರ ಇಳಿದ ಕೊರೊನಾ

By

Published : Jul 5, 2022, 10:18 AM IST

ನವದೆಹಲಿ:ದೇಶದಲ್ಲಿ ಕೆಲ ದಿನಗಳಿಂದ ಸತತವಾಗಿ ಏರಿಕೆ ಕಂಡಿದ್ದ ಕೋವಿಡ್ ಪ್ರಕರಣಗಳಲ್ಲಿ ಇಂದು ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 13,086 ಹೊಸ ಕೇಸ್​​​ಗಳು ದೃಢಪಟ್ಟಿದ್ದು, 24 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ದಿನಕ್ಕೆ ಹೋಲಿಸಿದರೆ 3406 ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿತವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕಳೆದೊಂದು ದಿನದಲ್ಲಿ 12,456 ಜನರು ಕೋವಿಡ್​​ನಿಂದ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 4,28,91,933 ಜನರು ಮಹಾಮಾರಿಯಿಂದ ಚೇತರಿಸಿಕೊಂಡಿದ್ದಾರೆ. ಸದ್ಯಕ್ಕೆ ದೇಶದಲ್ಲಿ 1,14,475 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸಾವಿನ ಸಂಖ್ಯೆ 5,25,245 ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ದಿನಂಪ್ರತಿ ದಾಖಲಾಗುವ ಸಕ್ರಿಯ ಕೇಸುಗಳ ಪ್ರಮಾಣ ಶೇ.0.26 ರಷ್ಟಿದ್ದರೆ, ಗುಣಮುಖರಾಗುವವರು ಶೇ.98.53 ರಷ್ಟಿದೆ. ಪಾಸಿಟಿವಿಟಿ ದರ ಶೇ.2.90 ರಷ್ಟು ಇದ್ದರೆ, ವಾರದ ಪಾಸಿಟಿವಿಟಿ 3.81 ಪ್ರಮಾಣದಲ್ಲಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಪ್ರಕಾರ, ಜುಲೈ 4 ರವರೆಗೆ 86,44,51,219 ಕೋಟಿ ಮಂದಿಗೆ ಕೊರೊನಾ ಮಾದರಿ ಪರೀಕ್ಷಿಸಲಾಗಿದೆ. ಈ ಪೈಕಿ ಸೋಮವಾ 4,51,312 ಮಂದಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದೆ.

ಇದನ್ನೂ ಓದಿ:ವಾಸಯೋಗ್ಯ ನಗರ ಅಗ್ರಪಟ್ಟದಿಂದ ಕುಸಿದ ಬೆಂಗಳೂರು, ಈ ವರ್ಷ 5ನೇ ಸ್ಥಾನ

ABOUT THE AUTHOR

...view details