ನವದೆಹಲಿ:ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಸ್ವಲ್ಪ ಪ್ರಮಾಣದ ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 2,34,281 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 893 ಮಂದಿಗೆ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಕಳೆದ 24 ಗಂಟೆಯಲ್ಲಿ 3,52,784 ಮಂದಿ ಕೋವಿಡ್ನಿಂದ ಚೇತರಿಕೆ ಕಂಡಿದ್ದಾರೆ. ದಿನವೊಂದರಲ್ಲಿ ಸೋಂಕು ಪರೀಕ್ಷೆ ಮಾಡಿಸಿಕೊಳ್ಳುವವರ ಪೈಕಿ ಸುಮಾರು ಶೇಕಡಾ 14.50ರಷ್ಟು ಮಂದಿಯಲ್ಲಿ ಸೋಂಕು ಕಂಡುಬರುತ್ತಿದೆ.
ಈವರೆಗೆ ಒಟ್ಟು 3,87,13,494 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಗುಣಮುಖರಾಗಿರುವವರ ಪ್ರಮಾಣ ಶೇಕಡಾ 94.21ರಷ್ಟಿದೆ ಎಂದು ಆರೋಗ್ಯ ಇಲಾಖೆಯ ಅಂಕಿ - ಅಂಶಗಳು ದೃಢಪಡಿಸಿವೆ. ಈವರೆಗೆ ದೇಶದಲ್ಲಿ ಸುಮಾರು 4,94,091 ಮಂದಿ ಮೃತಪಟ್ಟಿದ್ದಾರೆ.