ನವದೆಹಲಿ:ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗುವುದರ ಜೊತೆಗೆ, ಪಾಸಿಟಿವಿಟಿ ದರವೂ ತೀವ್ರ ಕಡಿಮೆಯಾಗುತ್ತಿದೆ. ನಿನ್ನೆಯಿಂದ 24 ಗಂಟೆ ಅವಧಿಯಲ್ಲಿ 10,273 ಕೊರೊನಾ ಹೊಸ ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಅಲ್ಲದೇ 243 ಜನರು ಸೋಂಕಿಗೆ ಬಲಿಯಾಗಿದ್ದಾರೆ.
24 ಗಂಟೆ ಅವಧಿಯಲ್ಲಿ 20,439 ಜನರು ಸೋಂಕಿನಿಂದ ಗುಣಮುಖರಾಗುವ ಮೂಲಕ ದೇಶದಲ್ಲಿ ಒಟ್ಟಾರೆ 4,22,90,921 ಮಂದಿ ಪೂರ್ಣ ಚೇತರಿಕೆ ಕಂಡಿದ್ದಾರೆ. ಗುಣಮುಖರಾಗುತ್ತಿರುವವರ ಪ್ರಮಾಣ ಶೇಕಡಾ 98.54 ರಷ್ಟಿದೆ. ಪಾಸಿಟಿವಿಟಿ ದರ ಶೇ.1 ಕ್ಕೆ ಕುಗ್ಗಿದೆ.
ಇದಲ್ಲದೇ, ಒಂದೇ ದಿನದಲ್ಲಿ 243 ಜನರು ಕೊರೊನಾಗೆ ಬಲಿಯಾಗುವ ಮೂಲಕ ಈವರೆಗೆ ದೇಶದಲ್ಲಿ ಸುಮಾರು 5,12,344 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ದೇಶದಲ್ಲೀಗ ಶೇ.1.24 ರಷ್ಟು ಮಾತ್ರ ಡೆತ್ರೇಟ್ ಇದೆ. ಸಕ್ರಿಯ ಸೋಂಕಿತರ ಸಂಖ್ಯೆ 1,11,472 ಮಾತ್ರ ಇದ್ದು, ಪಾಸಿಟಿವಿಟಿ ರೇಟ್(ದಿನಕ್ಕೆ) ಶೇ.0.26 ರಷ್ಟು ಇದ್ದರೆ, ವಾರಕ್ಕೆ 1.26 ಪ್ರತಿಶತ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಟೆಸ್ಟ್- ವ್ಯಾಕ್ಸಿನೇಷನ್:ದೇಶದಲ್ಲಿ ಈವರೆಗೆ ಸುಮಾರು 1,77,67,27,441 ಕೋಟಿ ಡೋಸ್ ವ್ಯಾಕ್ಸಿನೇಷನ್ ನೀಡಲಾಗಿದೆ. ಒಂದೇ ದಿನದಲ್ಲಿ 10,22,204 ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ.
ಇದನ್ನೂ ಓದಿ:ಆಪರೇಷನ್ ಗಂಗಾ: ಇಂದು ಮುಂಜಾನೆ ಉಕ್ರೇನ್‌ನಿಂದ ತವರಿಗೆ ಮರಳಿದ 250 ಭಾರತೀಯರು