ಕರ್ನಾಟಕ

karnataka

ETV Bharat / bharat

ಗುಜರಾತ್ ಕರಾವಳಿಯಲ್ಲಿ ದೋಣಿಗೆ ಆಕಸ್ಮಿಕ ಅಗ್ನಿ: 7 ಮೀನುಗಾರರ ರಕ್ಷಿಸಿದ ಕರಾವಳಿ ಪಡೆ - 7 ಮೀನುಗಾರರ ರಕ್ಷಿಸಿದ ಕರಾವಳಿ ಪಡೆ

ಅಗ್ನಿ ಅನಾಹುತಕ್ಕೊಳಗಾದ ಬೋಟ್​ನಲ್ಲಿದ್ದ ಮೀನುಗಾರರನ್ನು ಭಾರತೀಯ ಕರಾವಳಿ ಪಡೆ ರಕ್ಷಣೆ ಮಾಡಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ.

India Coast Guard saved 7 fishermen in Gujarat
ಬೋಟ್​ಗೆ ಆಕಸ್ಮಿಕ ಅಗ್ನಿ : 7 ಮೀನುಗಾರರ ರಕ್ಷಿಸಿದ ಕರಾವಳಿ ಪಡೆ

By

Published : Nov 7, 2021, 7:17 PM IST

ಗಾಂಧಿನಗರ(ಗುಜರಾತ್): ಮೀನುಗಾರಿಕಾ ಬೋಟ್​ನಲ್ಲಿ ಅಗ್ನಿ ಅವಘಡ ಸಂಭವಿಸಿ, ಅಪಾಯದಲ್ಲಿ ಸಿಲುಕಿದ್ದ ಸುಮಾರು 7 ಮಂದಿ ಮೀನುಗಾರರನ್ನು ಭಾರತೀಯ ಕರಾವಳಿ ಪಡೆ ರಕ್ಷಿಸಿದೆ.

ಅಗ್ನಿ ಅನಾಹುತಕ್ಕೆ ಒಳಗಾದ ಬೋಟ್​

ಅರಬ್ಬಿ ಸಮುದ್ರದಲ್ಲಿ ಗುಜರಾತ್ ಕರಾವಳಿಯಿಂದ ಸುಮಾರು 50 ಮೈಲು ದೂರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಬೋಟ್​ನಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದೆ. ಈ ವೇಳೆ ಭಾರತೀಯ ಕರಾವಳಿ ಪಡೆ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ರಕ್ಷಿಸಿದೆ.

ರಕ್ಷಿಸಲ್ಪಟ್ಟ ಮೀನುಗಾರರು

ಮೀನುಗಾರರನ್ನು ದ್ವಾರಕಾ ಜಿಲ್ಲೆಯ ಕರಾವಳಿ ನಗರವಾದ ಓಕಾ ಬಳಿಗೆ ಕರೆತರಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಯುವಜನತೆ ನಿಮ್ಮ ಮನದ ಮಾತಿನಂತೆ ನಡೆದುಕೊಳ್ಳಿ, ನಕಲು ಮಾಡಬೇಡಿ: NIT-Kಯಲ್ಲಿ ಇಸ್ರೋ ಅಧ್ಯಕ್ಷ ಶಿವನ್

ABOUT THE AUTHOR

...view details