ನವದೆಹಲಿ:ಪೂರ್ವ ಲಡಾಖ್ ಬಳಿಯ ನೈಜ ನಿಯಂತ್ರಣ ರೇಖೆಯ ಸಮೀಪದಲ್ಲಿ ನಿಯೋಜಿಸಲಾದ ವಾಯು ಕ್ಷಿಪಣಿ ಬಗ್ಗೆ ಭಾರತೀಯ ಭದ್ರತಾ ಸಂಸ್ಥೆಗಳು ಚೀನಾದ ಮೇಲೆ ತೀವ್ರ ನಿಗಾ ಇರಿಸಿವೆ.
ಎಚ್ಕ್ಯೂ -9 ಏರ್ ಕ್ಷಿಪಣಿ ರಷ್ಯಾದ ಎಸ್ -300 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ರಿವರ್ಸ್- ಇಂಜಿನಿಯರಿಂಗ್ ಆವೃತ್ತಿಯಾಗಿದ್ದು, ಸುಮಾರು 250 ಕಿಲೋಮೀಟರ್ ದೂರದಲ್ಲಿ ಗುರಿಗಳನ್ನು ಪತ್ತೆ ಹಚ್ಚಿ, ಹೊಡೆ ದುರುಳಿಸುತ್ತದೆ.
ಚೀನೀಯರು ನಿಯೋಜಿಸಿರುವ ವಾಯು ರಕ್ಷಣಾ ವ್ಯವಸ್ಥೆಗಳ ಬಗ್ಗೆ ಮತ್ತು ಅಲ್ಲಿ ಇರಿಸಲಾಗಿರುವ ಇತರ ವಸ್ತುಗಳ ಬಗ್ಗೆ ನಾವು ನಿಗಾ ಇಡುತ್ತಿದ್ದೇವೆ ಎಂದು ಮೂಲಗಳು ತಿಳಿಸಿವೆ.
ಹೊಟಾನ್ ಮತ್ತು ಕಾಷ್ಗರ್ ವಾಯುನೆಲೆಗಳಲ್ಲಿನ ಯುದ್ಧ ವಿಮಾನಗಳ ಸಂಖ್ಯೆ ಕಡಿಮೆ ಮಾಡಲಾಗಿದೆ ಎಂದು ಇತ್ತೀಚಿನ ವರದಿಗಳು ಸೂಚಿಸುತ್ತವೆ. ಆದರೆ, ಸಂಖ್ಯೆಗಳು ಕಾಲಕಾಲಕ್ಕೆ ಏರಿಳಿತಗೊಳ್ಳುತ್ತಿವೆ ಎಂದರು.
ಪ್ಯಾಂಗಾಂಗ್ ಸರೋವರ ಪ್ರದೇಶದಿಂದ ಉಭಯ ದೇಶಗಳು ಬೇರ್ಪಟ್ಟಿದ್ದರೂ ಎರಡೂ ಕಡೆಯಿಂದ ಯುದ್ಧ ವಿಮಾನ, ಟ್ಯಾಂಕರ್ ನಿಯೋಜನೆ ಮುಂದುವರೆದಿದೆ.
ಮಾತುಕತೆಯ ವೇಳೆ ಗೊಗ್ರಾ ಹೈಟ್ಸ್, ಹಾಟ್ ಸ್ಪ್ರಿಂಗ್ಸ್, ಡೆಪ್ಸಾಂಗ್ ಬಯಲು ಮತ್ತು ಡೆಮ್ಚೋಕ್ ಬಳಿಯ ಸಿಎನ್ಎನ್ ಜಂಕ್ಷನ್‌ನಲ್ಲಿ ಬಾಕಿ ಉಳಿದಿರುವ ಘರ್ಷಣೆ ಪ್ರದೇಶಗಳಿಂದ ಕಾಲ್ಕಿಳಲು ಚೀನಾ ಕಡೆಯವರು ಹಿಂಜರಿಯುತ್ತಿದ್ದಾರೆ.
ಭಾರತೀಯ ಸೇನೆ ಮತ್ತು ಇತರ ಭದ್ರತಾ ಪಡೆಗಳು ಲಡಾಕ್ ಸೆಕ್ಟರ್ ಮತ್ತು ಇತರ ಪರ್ವತ ಪ್ರದೇಶಗಳಲ್ಲಿ ಬೇಸಿಗೆಯ ನಿಯೋಜನೆಗಳಿಗೆ ಮರಳಲು ಪ್ರಾರಂಭಿಸಿವೆ. ಭಾರತ ಮತ್ತು ಚೀನಾದ ಸೈನ್ಯಗಳು ಕಳೆದ ವರ್ಷದಿಂದ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನಿಯೋಜಿಸಿವೆ.