ಕರ್ನಾಟಕ

karnataka

ETV Bharat / bharat

ಅರುಣಾಚಲದಲ್ಲಿ ಭಾರತ-ಚೀನಾ ಯೋಧರ ಘರ್ಷಣೆ; ಎರಡೂ ಕಡೆ ಯೋಧರಿಗೆ ಗಾಯ

ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವೆ ಘರ್ಷಣೆ ನಡೆದಿದೆ.

india-china-troops-clash-at-lac-in-arunachal-pradesh-6-soldiers-injured
LACಯಲ್ಲಿ ಭಾರತ ಚೀನಾ ಸೈನಿಕರ ಘರ್ಷಣೆ : 6 ಯೋಧರಿಗೆ ಗಾಯ

By

Published : Dec 12, 2022, 11:02 PM IST

ನವ ದೆಹಲಿ:ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಸಂಘರ್ಷ ನಡೆದಿದೆ. ಈ ಸಂದರ್ಭದಲ್ಲಿ ಎರಡೂ ಕಡೆಯ ಸೈನಿಕರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಈ ಘಟನೆಯ ಬಳಿಕ ಉಭಯ ದೇಶಗಳ ಸೈನಿಕರು ಸಂಘರ್ಷ ನಡೆದ ಪ್ರದೇಶದಿಂದ ಹೊರ ನಡೆದಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಮೂಲಗಳು ನೀಡಿದ ಮಾಹಿತಿಯಂತೆ, ಡಿಸೆಂಬರ್ 9 ರಂದು ಅರುಣಾಚಲ ಪ್ರದೇಶದ ವಾಸ್ತವ ಗಡಿರೇಖೆಯೊಳಗೆ(LAC) ನುಗ್ಗುವ ಪ್ರಯತ್ನವನ್ನು ಚೀನಾ ಸೈನಿಕರು ಮಾಡಿದ್ದಾರೆ. ಇದನ್ನು ಭಾರತೀಯ ಸೇನೆ ಬಲವಾಗಿ ವಿರೋಧಿಸಿದೆ. ಈ ಸಂದರ್ಭದಲ್ಲಿ ಸೈನಿಕರ ನಡುವೆ ಹೊಡೆದಾಟ ನಡೆದು ಎರಡೂ ಕಡೆಯ ಕೆಲವು ಸೈನಿಕರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಭಾರತೀಯ ವಾಯುಸೇನೆ ಮೆಸ್‌ ಸೇರಬೇಕಿದ್ದ 4 ಸಾವಿರ ಮೊಟ್ಟೆಗಳೊಂದಿಗೆ ರಿಕ್ಷಾ ಚಾಲಕ ಪರಾರಿ!

ABOUT THE AUTHOR

...view details