ನವದೆಹಲಿ : ಗಡಿ ಬಿಕ್ಕಟ್ಟು ವಿಚಾರವಾಗಿ ಮೊಲ್ಡೊ- ಚುಶುಲ್ನಲ್ಲಿ ಚೀನಾ, ಭಾರತದ ನಡುವೆ ನಿನ್ನೆ (ಜನವರಿ 24) 9 ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಸಭೆ ನಡೆಯಿತು. ಈ ಸಭೆಯು ಪ್ರಾಯೋಗಿಕ, ವಾಸ್ತವವಾಗಿ ನಡೆದಿದ್ದು, ಗಡಿಯಲ್ಲಿ ನಿಯೋಜಿಸಲಾಗಿದ್ದ ಸೇನೆಯನ್ನು ಹಿಂಪಡೆಯಲು ಎರಡೂ ರಾಷ್ಟ್ರಗಳು ಒಪ್ಪಿರುವುದಾಗಿ ಭಾರತೀಯ ಸೇನೆ ತಿಳಿಸಿದೆ.
ಗಡಿ ಸಂಘರ್ಷ : ಸೇನೆ ಹಿಂಪಡೆಯಲು ಇಂಡೋ, ಚೀನಾ ಒಪ್ಪಿಗೆ
9ನೇ ಸುತ್ತಿನ ಸಭೆಯು ಸಕಾರಾತ್ಮಕ, ಪ್ರಾಯೋಗಿಕ ಮತ್ತು ರಚನಾತ್ಮಕವಾಗಿದೆ ಎಂದು ಉಭಯ ರಾಷ್ಟ್ರಗಳ ಸೇನೆಗಳು ಒಪ್ಪಿವೆ. ಅಲ್ಲದೆ ಎಲ್ಎಸಿ (ಗಡಿ ನಿಯಂತ್ರಣಾ ರೇಖೆ)ಯಲ್ಲಿ ಪರಸ್ಪರ ಶಾಂತಿ, ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಾಗಿ ಹೇಳಿವೆ.
9 ನೇ ಸುತ್ತಿನ ಸಭೆಯು ಸಕಾರಾತ್ಮಕ, ಪ್ರಾಯೋಗಿಕ ಮತ್ತು ರಚನಾತ್ಮಕವಾಗಿದೆ ಎಂದು ಉಭಯ ರಾಷ್ಟ್ರಗಳ ಸೇನೆಗಳು ಒಪ್ಪಿವೆ. ಅಲ್ಲದೆ ಎಲ್ಎಸಿ (ಗಡಿ ನಿಯಂತ್ರಣಾ ರೇಖೆ)ಯಲ್ಲಿ ಪರಸ್ಪರ ಶಾಂತಿ, ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಾಗಿ ಹೇಳಿವೆ. ಶೀಘ್ರದಲ್ಲೇ 10 ನೇ ಸುತ್ತಿನ ಮಾತುಕತೆ ನಡೆಸುವುದಾಗಿ ತಿಳಿದು ಬಂದಿದೆ.
ಗಾಲ್ವಾನ್ ಕಣಿವೆ ಸಂಘರ್ಷದ ಬಳಿಕ ಸುಮಾರು 9 ತಿಂಗಳ ಕಾಲ ಎಲ್ಎಸಿಯಲ್ಲಿ ಇಂಡೋ- ಚೀನಾ ಸೇನಾಪಡೆಗಳು ಬೀಡು ಬಿಟ್ಟಿದ್ದು, ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಪ್ರಸ್ತುತ ಪೂರ್ವ ಲಡಾಖ್ನಲ್ಲಿ 50 ಸಾವಿರ ಭಾರತೀಯ ಸೈನಿಕರಿದ್ದಾರೆ. ಈವರೆಗೂ ನಡೆದ ಸಭೆಗಳಲ್ಲಿ ಯಾವುದೇ ಬೆಳವಣಿಗೆಗಳು ಕಂಡು ಬಂದಿರಲಿಲ್ಲ. ಪ್ರಸ್ತುತ ಉಭಯ ಸೇನೆಗಳು ಗಡಿಯಿಂದ ಹಿಂದೆ ಸರಿಯುವ ನಿರ್ಧಾರ ತಳೆದಿದ್ದು ಆಶಾದಾಯಕವಾಗಿದೆ.