ಕರ್ನಾಟಕ

karnataka

ETV Bharat / bharat

ನಾಳೆ ಭಾರತ - ಚೀನಾ ನಡುವೆ 10ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ - disengagement process from both north and south banks of Pangong Lake

ಭಾರತ - ಚೀನಾ ನಡುವೆ ಈಗಾಗಲೇ 9 ಬಾರಿ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆದಿದ್ದು, ನಾಳೆ 10ನೇ ಸುತ್ತಿನ ಮಾತುಕತೆ ನಡೆಯಲಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

India, China to hold 10th round of Corps Commander level talks tomorrow
ನಾಳೆ ಭಾರತ - ಚೀನಾ ನಡುವೆ 10ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ

By

Published : Feb 19, 2021, 2:31 PM IST

ನವದೆಹಲಿ: ಪ್ಯಾಂಗಾಂಗ್​​​ ಸರೋವರದ ಉತ್ತರ ಮತ್ತು ದಕ್ಷಿಣ ತೀರಗಳಿಂದ ತಮ್ಮ ಸೇನೆಯನ್ನು ವಾಪಸ್​​​ ಕರೆಯಿಸಿಕೊಂಡಿರುವ ಭಾರತ ಹಾಗೂ ಚೀನಾ ನಾಳೆ 10ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆಸಲಿವೆ.

ಚೀನಾದ ಕಡೆಯ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ನಾಳೆ ಬೆಳಗ್ಗೆ 10 ಗಂಟೆಗೆ ಮಾತುಕತೆ ನಡೆಯಲಿದ್ದು, ಪ್ಯಾಂಗಾಂಗ್​ ಸರೋವರದಿಂದ ಸೇನೆಗಳು ಹಿಂದಕ್ಕೆ ಸರಿದಿರುವ ಕುರಿತು ಉಭಯ ರಾಷ್ಟ್ರಗಳು ಚರ್ಚಿಸಲಿವೆ ಎಂದು ಸೇನಾ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಗಾಲ್ವಾನ್ ಕಣಿವೆ ಸಂಘರ್ಷ: ಅಂದು ತನ್ನ 4 ಯೋಧರು ಹುತಾತ್ಮರಾಗಿದ್ದನ್ನ ಒಪ್ಪಿದ ಚೀನಾ

ಕಳೆದ ವಾರ ಸಂಸತ್​ ಅಧಿವೇಶನದಲ್ಲಿ ಮಾತನಾಡಿದ್ದ ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಚೀನಾದೊಂದಿಗಿನ ನಮ್ಮ ನಿರಂತರ ಮಾತುಕತೆಗಳು ಪಾಂಗಾಂಗ್​​ ಸರೋವರದ ಉತ್ತರ ಮತ್ತು ದಕ್ಷಿಣ ತೀರದಿಂದ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಹಾಗೂ ಭಾರತೀಯ ಸೇನೆ ಹಿಂದೆ ಸರಿಯುವ ಒಪ್ಪಂದ ಮಾಡಿಕೊಳ್ಳಲು ಕಾರಣವಾಗಿವೆ ಎಂದು ಹೇಳಿದ್ದರು. ಇದಕ್ಕೆ ಪೂರಕವಾದ ಫೋಟೋ ಮತ್ತು ವಿಡಿಯೋಗಳನ್ನ ಭಾರತೀಯ ಸೇನೆ ಬಿಡುಗಡೆ ಮಾಡಿತ್ತು.

ಭಾರತ - ಚೀನಾ ನಡುವೆ ಈಗಾಗಲೇ 9 ಬಾರಿ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆದಿದೆ. ಇದಕ್ಕೂ ಮೊದಲು 2020ರ ಜೂನ್ 6, ಜೂನ್ 22, ಜೂನ್ 30, ಜುಲೈ 14, ಆಗಸ್ಟ್ 2, ಸೆಪ್ಟೆಂಬರ್​ 21, ಅಕ್ಟೋಬರ್ 12, ನವೆಂಬರ್​ 6 ಹಾಗೂ 2021ರ ಜನವರಿ 24ರಂದು ಸಭೆಗಳು ನಡೆದಿದ್ದವು.

ABOUT THE AUTHOR

...view details