ನವದೆಹಲಿ:ಭಾರತ, ಚೀನಾ ಗಡಿಯಲ್ಲಿ ಆಗಾಗ ಸಂಘರ್ಷಗಳು ಸಂಭವಿಸುತ್ತಿರುತ್ತವೆ. ಲಡಾಖ್ ಗಡಿ ಮಾತ್ರವಲ್ಲದೇ, ದೇಶದ ಈಶಾನ್ಯ ದಿಕ್ಕಿನಲ್ಲಿರುವ ಅರುಣಾಚಲ ಪ್ರದೇಶದ ಗಡಿಯನ್ನೂ ಕೂಡಾ ವಿವಾದ ಸೃಷ್ಟಿಸಲು ಚೀನಾ ಬಳಸಿಕೊಳ್ಳುತ್ತಿದೆ.
ಈ ಹಿನ್ನೆಲೆಯಲ್ಲಿ ಕಳೆದ ವಾರವೂ ಗಡಿ ವಿಚಾರವಾಗಿ ಅರುಣಾಚಲ ಸೆಕ್ಟರ್ನಲ್ಲಿ ಭಾರತ ಮತ್ತು ಚೀನಾ ಸೈನಿಕರು ಪರಸ್ಪರ ಮುಖಾಮುಖಿಯಾಗಿದ್ದಾರೆ ಎಂಬ ವಿಚಾರವನ್ನು ಕೇಂದ್ರ ಸರ್ಕಾರ ದೃಢಪಡಿಸಿದೆ.
ಉಭಯ ದೇಶಗಳ ಗಡಿ ರೇಖೆಯಾದ ವಾಸ್ತವ ನಿಯಂತ್ರಣ ರೇಖೆ (Line of Actual Control) ಗ್ರಹಿಕೆಯಲ್ಲಿ ಆದ ಏರುಪೇರಿನ ಕಾರಣದಿಂದಾಗಿ ಎರಡೂ ಸೇನೆಗಳು ಮುಖಾಮುಖಿಯಾಗಿದ್ದವು.