ಕರ್ನಾಟಕ

karnataka

By

Published : Jul 31, 2021, 7:08 AM IST

ETV Bharat / bharat

ಲಡಾಖ್​ ಗಡಿ ವಿವಾದ: ಇಂಡೋ-ಚೀನಾ ನಡುವೆ 12 ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಸಭೆ

ಭಾರತ-ಚೀನಾ ನಡುವಿನ ಗಡಿ ಸಂಘರ್ಷದ ವಿಚಾರವಾಗಿ ಇಂದು ಹನ್ನೆರಡನೇ ಸುತ್ತಿನ ಮಾತುಕತೆ ನಡೆಯಲಿದೆ.

India-China
India-China

ನವದೆಹಲಿ:ಪೂರ್ವ ಲಡಾಖ್ ಗಡಿ ಸಂಘರ್ಷದ ವಿಚಾರವಾಗಿ ಭಾರತ-ಚೀನಾ ಇಂದು ಹನ್ನೆರಡನೇ ಸುತ್ತಿನ ಕಾರ್ಪ್ಸ್​ ಕಮಾಂಡರ್ ಮಟ್ಟದ ಮಾತುಕತೆ ನಡೆಸಲಿವೆ ಎಂದು ಸೇನಾ ಮೂಲಗಳು ತಿಳಿಸಿವೆ. ನಿರಂತರ ಮಾತುಕತೆಯಿಂದ ಪಾಂಗಾಂಗ್​ ಸರೋವರದಿಂದ ಉಭಯ ಸೇನೆಗಳು ಹಿಂದೆ ಸರಿದಿವೆ. ಕಳೆದ ವರ್ಷ ಲಡಾಖ್​ ಗಡಿಯಲ್ಲಿ ಚೀನಾದ ಆಕ್ರಮಣ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.

ಇಂದು ಬೆಳಗ್ಗೆ 10.30 ಕ್ಕೆ ಭಾರತ-ಚೀನಾ ನಡುವಿನ 12 ನೇ ಕಾರ್ಪ್ಸ್​ ಕಮಾಂಡರ್​ ಮಟ್ಟದ ಮಾತುಕತೆಯು ಮೊಲ್ಡೊದಲ್ಲಿ ನಡೆಯಲಿದೆ. ಘರ್ಷಣೆಯ ಕೇಂದ್ರ ಬಿಂದುಗಳಾಗಿರುವ ಗೊಗ್ರಾ ಹೈಟ್ಸ್ ಮತ್ತು ಹಾಟ್​ ಸ್ಟ್ರಿಂಗ್ಸ್ ಪ್ರದೇಶಗಳಿಂದಲೂ ಸೇನೆ ಹಿಂದೆ ಸರಿಯುವ ಕುರಿತು ಚರ್ಚೆ ನಡೆಯಲಿದೆ.

ಇದನ್ನೂ ಓದಿ: ಪಾಕಿಸ್ತಾನ - ಚೀನಾ ಸಂಬಂಧ ಸದೃಢವಾಗಿದೆ: ಸೇನಾ ಮುಖ್ಯಸ್ಥ ಬಜ್ವಾ ಬಣ್ಣನೆ

ಉಭಯ ದೇಶಗಳು ಸುಮಾರು ಒಂದು ವರ್ಷದಿಂದ ಮಿಲಿಟರಿ ಘರ್ಷಣೆಯಲ್ಲಿ ತೊಡಗಿದ್ದವು. ಮಿಲಿಟರಿ-ರಾಜಕೀಯ ಮಟ್ಟದಲ್ಲಿ ಮಾತುಕತೆ ನಡೆಸಿದ ಬಳಿಕ ಪಾಂಗಾಂಗ್ ಸರೋವರದಿಂದ ಉಭಯ ಸೇನೆಗಳು ಹಿಂದೆ ಸರಿದಿದ್ದವು.

ABOUT THE AUTHOR

...view details