ಹೈದರಾಬಾದ್:ಕಳೆದ ವಾರ ಉತ್ತರ ಸಿಕ್ಕಿಂನ ನಾಕು ಲಾ ಗಡಿ ಭಾಗದಲ್ಲಿನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಭಾರತ ಹಾಗೂ ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿರುವುದು ಬೆಳಕಿಗೆ ಬಂದಿದೆ.
ಭಾರತೀಯ ಯೋಧರು ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಈ ಸಂಘರ್ಷ ಉಂಟಾಗಿದೆ. ಜನವರಿ ತಿಂಗಳಲ್ಲಿ ನಡೆದಿದ್ದ ಘರ್ಷಣೆಯಲ್ಲಿ ಇಬ್ಬರು ಅಧಿಕಾರಿಗಳು, ಮೂವರು ಭಾರತೀಯ ಯೋಧರು ಗಾಯಗೊಂಡಿದ್ದರು.
ಇದಾದ ಬಳಿಕ ಸಿಕ್ಕಿಂನ ನಾಕು ಲಾ ಗಡಿ ಭಾಗದಲ್ಲಿ ಮತ್ತೊಮ್ಮೆ ಎರಡು ಸೇನೆ ನಡುವೆ ಸಂಘರ್ಷ ಉಂಟಾಗಿದ್ದು, ಸ್ಥಳೀಯ ಮಟ್ಟದ ಅಧಿಕಾರಿಗಳು ಈ ಸಮಸ್ಯೆ ಬಗೆಹರಿಸಿದ್ದಾರೆ.
ಏನಿದು 'ನಾಕು ಲಾ'? :ನಾಕು ಲಾ ಭಾರತದ ಸಿಕ್ಕಿಂ ರಾಜ್ಯ ಮತ್ತು ಪೂರ್ವ ಹಿಮಾಲಯದಲ್ಲಿ ಚೀನಾದ ಆಕ್ರಮಿತ ಟಿಬೆಟ್‌ನ ಗಡಿಯಲ್ಲಿದೆ. ಉತ್ತರ ಸಿಕ್ಕಿಂ ಮತ್ತು ಟಿಬೆಟಿಯನ್ನರ ನಿವಾಸಿಗಳು ಇದನ್ನು "ನಕ್-ಪೊ-ಲಾ" ಎಂದು ಕರೆಯುತ್ತಾರೆ, ಇದರರ್ಥ "ಬ್ಲ್ಯಾಕ್ ಪಾಸ್". ಟಿಬೆಟಿಯನ್ ಪದದಲ್ಲಿ, “ನಕ್-ಪೊ” ಎಂದರೆ ಕಪ್ಪು ಮತ್ತು “ಲಾ” ಎಂದರೆ ಪರ್ವತ ಎಂದರ್ಥ.
ಗಡಿಭಾಗದಲ್ಲಿ ಮಾತಿನ ಚಕಮಕಿ :ಸಿಕ್ಕಿಂನ ವಾಸ್ತವ ಗಡಿ ಪ್ರದೇಶದಲ್ಲಿ (ಎಲ್‌ಎಸಿ) ಚೀನಾ ಪಡೆಗಳು ಭಾರತದ ನಾಕು ಲಾ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸಿದ್ದವು. ಚೀನಾ ಅತಿಕ್ರಮಣವನ್ನು ಭಾರತೀಯ ಯೋಧರು ತಡೆದರು. ಈ ವೇಳೆ ಎರಡು ಕಡೆಯ ಸೇನೆಗಳು ಮುಖಾಮುಖಿಯಾದವು ಎಂದು ಮೂಲಗಳು ತಿಳಿಸಿವೆ.
ಸಿಕ್ಕಿಂನ ಪ್ರಾಮುಖ್ಯತೆ ಏನು? :ಸಿಕ್ಕಿಂ ಭಾರತಕ್ಕೆ ಹೆಚ್ಚಿನ ಕಾರ್ಯತಂತ್ರದ ಮಹತ್ವ ಹೊಂದಿದೆ. ಇದು ಪಶ್ಚಿಮ ಬಂಗಾಳದಲ್ಲಿ ಸುಮಾರು 180 ಕಿ.ಮೀ ಉದ್ದ ಮತ್ತು 22 ಕಿ.ಮೀ ಅಗಲವಿರುವ ಕಿರಿದಾದ ಸಿಲಿಗುರಿ ಕಾರಿಡಾರ್‌ನ ಹೆಬ್ಬಾಗಿಲು, ಇದು ಭಾರತದ ಉಳಿದ ಭಾಗಗಳನ್ನು ಈಶಾನ್ಯದ ಏಳು ಮಾರ್ಗದ ಮೂಲಕ ಸಂಪರ್ಕಿಸುತ್ತದೆ. ಕಾರಿಡಾರ್‌ನ ಉತ್ತರ ಭಾಗದಲ್ಲಿ ನೇಪಾಳ ಮತ್ತು ಭೂತಾನ್ ಹಾಗೂ ದಕ್ಷಿಣಕ್ಕೆ ಬಾಂಗ್ಲಾದೇಶವಿದೆ.
ಸಿಕ್ಕಿಂನ ಗಡಿ ಮತ್ತೊಂದು ಕಾರಣಕ್ಕಾಗಿ ನಿರ್ಣಾಯಕವಾಗಿದೆ. ಚೀನಾದ ಆಕ್ರಮಣಕ್ಕೆ ಭಾರತವು ಆಕ್ರಮಣಕಾರಿ ಪ್ರತಿಕ್ರಿಯೆಯನ್ನು ನೀಡುವ ಏಕೈಕ ಪ್ರದೇಶವೆಂದು ಇದನ್ನು ಗುರುತಿಸಲಾಗಿದೆ. ಮತ್ತು ಭಾರತೀಯ ಸೈನ್ಯವು ಭೂಪ್ರದೇಶ ಮತ್ತು ಯುದ್ಧತಂತ್ರವನ್ನು ನಡೆಸಲು ಸೂಕ್ತ ಜಾಗ ಎಂದು ಭಾರತೀಯ ಮಿಲಿಟರಿ ತಜ್ಞರು ಅಭಿಪ್ರಾಯಪಡುತ್ತಾರೆ.
ಸಿಕ್ಕಿಂ ಚೀನಾದೊಂದಿಗೆ ಸುಮಾರು 300 ಕಿ.ಮೀ ಗಡಿಯನ್ನು ಹೊಂದಿದ್ದು, ಸಿಕ್ಕಿಂ-ಸಿಒಟಿ (ಚೀನಾ ಆಕ್ರಮಿತ ಟಿಬೆಟ್) ಗಡಿಯಲ್ಲಿ ಒಟ್ಟು 14 ಪಾಸ್‌ಗಳಿದ್ದು, ಇವುಗಳಲ್ಲಿ ಕೆಲವು ಮಾರ್ಗಗಳನ್ನು ಹೊರತು ಪಡಿಸಿ ಇನ್ನುಳಿದ ಮಾರ್ಗ ಭಾರತೀಯ ಸೈನ್ಯವನ್ನು ಹೊರತುಪಡಿಸಿ ಹೊರಗಿನ ಪ್ರಪಂಚಕ್ಕೆ ತಿಳಿದಿಲ್ಲ.
ಸಿಕ್ಕಿಂ-ಸಿಒಟಿ (ಚೀನಾ ಆಕ್ರಮಿತ ಟಿಬೆಟ್) ಗಡಿ ಒಪ್ಪಂದ :ಸಿಕ್ಕಿಂ-ಕೋಟ್ (ಚೀನಾ ಆಕ್ರಮಿತ ಟಿಬೆಟ್) ಗಡಿಯನ್ನು 1890ರ ಐತಿಹಾಸಿಕ ಸಿಕ್ಕಿಂ-ಟಿಬೆಟ್ ಸಮಾವೇಶದ ಆಧಾರದ ಮೇಲೆ ಇತ್ಯರ್ಥಪಡಿಸಲಾಗಿದೆ. ಈ ಒಪ್ಪಂದವು ವಾಟರ್‌ಶೆಡ್‌ನ ತತ್ವವನ್ನು ಆಧರಿಸಿದೆ.
ಸಿಕ್ಕಿಂ ಮತ್ತು ಟಿಬೆಟ್ ನಡುವಿನ ಗಡಿನಾಡುಗಳು ತೀಸ್ತಾ ನದಿಗೆ ಹರಿಯುವ ನೀರಿನಿಂದ ಬೇರ್ಪಟ್ಟ ಪರ್ವತ ಶ್ರೇಣಿಯ ಶಿಖರವನ್ನು ಆಧರಿಸಿರುತ್ತದೆ ಮತ್ತು ದಕ್ಷಿಣದ ಅದರ ಉಪನದಿಗಳು ಮತ್ತು ಉತ್ತರದಲ್ಲಿ ಟಿಬೆಟ್ ಮಂಚು ನದಿಗಳು ನೇಪಾಳವನ್ನು ಸೇರುವವರೆಗೆ ಇರುತ್ತದೆ ಎಂದು ಆರ್ಟಿಕಲ್-1ರ ದಾಖಲಾತಿಯಲ್ಲಿ ತಿಳಿಸಲಾಗಿದೆ.
ಚೀನಾ ಸಿಕ್ಕಿಂ ಭಾರತದ ಭಾಗವೆಂದು ಗುರುತಿಸಿತು :2003ರಂದು, ಅಂದಿನ ಚೀನಾದ ಪ್ರಧಾನಮಂತ್ರಿ ವೆನ್ ಜಿಯಾಬೊ ಮತ್ತು ಭಾರತೀಯ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಡುವಿನ ಪ್ರಮುಖ ಶೃಂಗಸಭೆಯ ಸಂದರ್ಭದಲ್ಲಿ ಬೀಜಿಂಗ್ ಸಿಕ್ಕಿಂನ ಭಾರತದ ಅವಿಭಾಜ್ಯ ಅಂಗ ಮತ್ತು ಜಲಾನಯನ ಪ್ರದೇಶದ ಗಡಿಯೆಂದು ಗುರುತಿಸಿತು.