ನವದೆಹಲಿ:ಸುಪ್ರೀಂ ಕೋರ್ಟ್‌ನಲ್ಲಿ ಮೊದಲ ಬಾರಿಗೆ ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ನಡೆಸುತ್ತಿರುವ ಕಲಾಪಗಳನ್ನು ನೇರ ಪ್ರಸಾರ ಮಾಡಲಾಗುತ್ತಿದೆ. ಕೊನೆಯ ಕೆಲಸದ ದಿನದಂದು ಸಿಜೆಐ ರಮಣ ಅವರು ಸಿಜೆಐ - ನಿಯೋಜಿತ ನ್ಯಾಯಮೂರ್ತಿ ಯುಯು ಲಲಿತ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರೊಂದಿಗೆ ಬೆಳಗ್ಗೆ 10.30 ಕ್ಕೆ ಪೀಠವನ್ನು ಹಂಚಿಕೊಂಡರು.
ಎನ್‌ವಿ ರಮಣ, ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ. ಇಂದು ಅವರ ಅಧಿಕಾರ ಅವಧಿ ಮುಕ್ತಾಯವಾಗಲಿದೆ. ಅವರ ಸ್ಥಾನಕ್ಕೆ ಯುಯು ಲಲಿತ ಬರಲಿದ್ದಾರೆ. ಅವರು ಕಳೆದ ವರ್ಷ ಏಪ್ರಿಲ್ 24 ರಂದು 48 ನೇ ಸಿಜೆಐ ಆಗಿ ಜವಾಬ್ದಾರಿ ವಹಿಸಿಕೊಂಡರು. ತಮ್ಮ 16 ತಿಂಗಳ ಅಧಿಕಾರಾವಧಿಯಲ್ಲಿ ಅವರು ಜನರ ಸೇವೆಗಾಗಿ ಹಲವು ಪ್ರಮುಖ ತೀರ್ಪುಗಳನ್ನು ಮತ್ತು ಆದೇಶಗಳನ್ನು ಹೊರಡಿಸಿ ಗಮನ ಸೆಳೆದಿದ್ದಾರೆ.