ಕರ್ನಾಟಕ

karnataka

ETV Bharat / bharat

ಕಳೆದ 7 ವರ್ಷಗಳಲ್ಲಿ ಭಾರತವು 200ಕ್ಕೂ ಹೆಚ್ಚು ಅಮೂಲ್ಯ ವಿಗ್ರಹಗಳನ್ನು ಮರಳಿ ತಂದಿದೆ - ಮೋದಿ - ಭಾರತದಿಂದ ಕಳ್ಳಸಾಗಣೆ ಮಾಡಲಾದ ವಿಗ್ರಹಗಳು

ಕೆಲವು ವರ್ಷಗಳ ಹಿಂದೆ ಸುಮಾರು 700 ವರ್ಷಗಳಷ್ಟು ಹಳೆಯದಾದ ತಮಿಳುನಾಡಿನ ವೆಲ್ಲೂರಿನಲ್ಲಿ ಭಗವಾನ್ ಆಂಜನೇಯರ್, ಹನುಮಾನ್ ವಿಗ್ರಹವನ್ನು ಕಳವು ಮಾಡಲಾಗಿತ್ತು, ಈ ತಿಂಗಳ ಆರಂಭದಲ್ಲಿ ಅದು ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಮಿಷನ್‌ಗೆ ಹಸ್ತಾಂತರಿಸಲಾಗಿದೆ ಎಂದು ಮೋದಿ ಮಾಹಿತಿ ನೀಡಿದರು..

PM Modi in Mann Ki Baat
PM Modi in Mann Ki Baat

By

Published : Feb 27, 2022, 12:25 PM IST

ನವದೆಹಲಿ :ನಮ್ಮ ದೇಶದಿಂದ ಕದ್ದ ಅಥವಾ ಕಳ್ಳಸಾಗಣೆ ಮಾಡಲಾದ 200ಕ್ಕೂ ಹೆಚ್ಚು ಅಮೂಲ್ಯ ಹಾಗೂ ಬೆಲೆಬಾಳುವ ವಿಗ್ರಹಗಳನ್ನು ಕಳೆದ ಏಳು ವರ್ಷಗಳಲ್ಲಿ, ಅಂದರೆ 2014ರ ನಂತರ ಭಾರತಕ್ಕೆ ಯಶಸ್ವಿಯಾಗಿ ಮರಳಿ ತರಲಾಗಿದೆ. 2013ರವರೆಗೆ ಕೇವಲ 13 ವಿಗ್ರಹಗಳನ್ನ ಮಾತ್ರ ತರಲಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ಕಾಂಗ್ರೆಸ್​ಗೆ ಟಾಂಗ್​ ನೀಡಿದರು.

ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನ 86ನೇ ಆವೃತ್ತಿಯಲ್ಲಿ ಮಾತನಾಡಿದ ಪಿಎಂ ಮೋದಿ, ಇತ್ತೀಚಿನ ದಿನಗಳಲ್ಲಿ ಭಾರತವು ಇಟಲಿ ಮತ್ತು ಆಸ್ಟ್ರೇಲಿಯಾದಿಂದ ಯಶಸ್ವಿಯಾಗಿ ಮರಳಿ ತಂದ ವಿಗ್ರಹಗಳ ಬಗ್ಗೆ ತಿಳಿಸಿದರು.

ಈ ವಿಗ್ರಹಗಳನ್ನು ಕಳ್ಳಸಾಗಣೆ ಮಾಡಿದ ರಾಷ್ಟ್ರಗಳು ಇದೀಗ ಆ ವಿಗ್ರಹಗಳೊಂದಿಗೆ ಭಾರತದ ಪರಂಪರೆಗಿದ್ದ ಬಾಂಧವ್ಯವನ್ನು ಅರಿತುಕೊಳ್ಳುತ್ತಿವೆ ಎಂದರು. ಭಾರತದಿಂದ ಕಳ್ಳಸಾಗಣೆಯಾದ ವಿಗ್ರಹಗಳನ್ನು ಹಿಂಪಡೆಯಲು ಸಹಾಯ ಮಾಡಲು ಇತರ ದೇಶಗಳು ಮುಂದೆ ಬರುತ್ತಿರುಬವುದಕ್ಕೆ ಧನ್ಯವಾದ ಅರ್ಪಿಸಿದರು.

ಹೀಗೆ ಇಟಲಿಯಿಂದ ಮರಳಿ ಪಡೆದ ವಿಗ್ರಹಗಳಲ್ಲಿ ಅವಲೋಕಿತೇಶ್ವರ ಪದ್ಮಪಾಣಿಯು 1,000 ವರ್ಷಗಳಷ್ಟು ಹಳೆಯದು. ಇದು ಕೆಲವು ವರ್ಷಗಳ ಹಿಂದೆ ಗಯಾದ ದೇವಿಸ್ಥಾನ ಕುನ್ಲಾನ್‌ಪುರ್ ದೇವಾಲಯದಿಂದ ಕಳವಾಗಿತ್ತು. ಆದರೆ, ಸಾಕಷ್ಟು ಪ್ರಯತ್ನದ ನಂತರ ಭಾರತವು ಪ್ರತಿಮೆಯನ್ನು ಮರಳಿ ಪಡೆದಿದೆ.

ಅಂತೆಯೇ ಕೆಲವು ವರ್ಷಗಳ ಹಿಂದೆ ಸುಮಾರು 700 ವರ್ಷಗಳಷ್ಟು ಹಳೆಯದಾದ ತಮಿಳುನಾಡಿನ ವೆಲ್ಲೂರಿನಲ್ಲಿ ಭಗವಾನ್ ಆಂಜನೇಯರ್, ಹನುಮಾನ್ ವಿಗ್ರಹವನ್ನು ಕಳವು ಮಾಡಲಾಗಿತ್ತು, ಈ ತಿಂಗಳ ಆರಂಭದಲ್ಲಿ ಅದು ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಮಿಷನ್‌ಗೆ ಹಸ್ತಾಂತರಿಸಲಾಗಿದೆ ಎಂದು ಮೋದಿ ಮಾಹಿತಿ ನೀಡಿದರು.

ಇದನ್ನೂ ಓದಿ: ಕಾಂಗ್ರೆಸ್‌ ನಾಯಕರ ಮೇಕೆದಾಟು 2.0 ಪಾದಯಾತ್ರೆ ಪ್ರಾರಂಭ

ಒಂದು ಸಾವಿರ ವರ್ಷಗಳ ಇತಿಹಾಸದಲ್ಲಿ ಭಾರತದ ಮೂಲೆ ಮೂಲೆಗಳಲ್ಲಿ ಭವ್ಯವಾದ ವಿಗ್ರಹಗಳು ಮತ್ತು ಪ್ರತಿಮೆಗಳನ್ನು ಕೆತ್ತಲಾಗಿದೆ. ನಮ್ಮ ಪ್ರತಿಯೊಂದು ವಿಗ್ರಹಗಳು ತನ್ನದೇ ಆದ ಸಮಯವನ್ನು ಪ್ರತಿಬಿಂಬಿಸುತ್ತವೆ. ಅವು ಭಾರತೀಯ ಶಿಲ್ಪಕಲೆ ಕೌಶಲ್ಯದ ಅನನ್ಯ ಉದಾಹರಣೆಗಳಷ್ಟೇ ಅಲ್ಲ, ನಮ್ಮ ನಂಬಿಕೆಗಳು ಸಹ ಅವುಗಳೊಂದಿಗೆ ಸಂಬಂಧ ಹೊಂದಿವೆ.

ಈ ಹಿಂದೆ ಭಾರತದಿಂದ ವಿವಿಧ ದೇಶಗಳಿಗೆ ಅನೇಕ ವಿಗ್ರಹಗಳನ್ನು ಕದ್ದು ಕಳ್ಳಸಾಗಣೆ ಮಾಡಲಾಗಿತ್ತು. ಅವರಿಗೆ ಕದ್ದ ವಸ್ತುಗಳು ಕೇವಲ ವಿಗ್ರಹಗಳಾಗಿದ್ದವು. ಈ ವಿಗ್ರಹಗಳು ಭಾರತದ ಆತ್ಮ ಮತ್ತು ನಂಬಿಕೆಯ ಭಾಗವಾಗಿದೆ ಎಂದು ಪ್ರಧಾನಿ ಹೇಳಿದರು.

ABOUT THE AUTHOR

...view details