ನ್ಯೂಯಾರ್ಕ್:ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲ ರಾಷ್ಟ್ರಗಳು ಪಕ್ಷಪಾತದ ಹಿತಾಸಕ್ತಿಗಳನ್ನು ಮೀರಿ ಒಗ್ಗೂಡುವಂತೆ ಭಾರತ ಅಂತಾರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಮಿತಿ ಸಭೆಯಲ್ಲಿ(UNSC) ಮಾತನಾಡಿದ ವಿಶ್ವಸಂಸ್ಥೆಯ ಭಾರತದ ರಾಯಭಾರಿ ಟಿಎಸ್ ತಿರುಮೂರ್ತಿ(UN TS Tirumurti ), ಆಫ್ಘನ್ ಸಮಾಜದ ಎಲ್ಲಾ ವರ್ಗಗಳ ಏಳಿಗೆಗೆ ಶ್ರಮಿಸುವಂತೆ ಕರೆ ನೀಡಿದೆ.
"ಅಫ್ಘಾನಿಸ್ತಾನದ ಜನರಿಗೆ ಹೆಚ್ಚು ಅಗತ್ಯವಿರುವ ಸಹಾಯವನ್ನು ತ್ವರಿತವಾಗಿ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಸಕಾಲವಾಗಿದ್ದು, ಇತರರ ನೆರವಿನೊಂದಿಗೆ ಇಂತಹ ಸಹಾಯ ಮಾಡಲು ಹಾಗೂ ಅಲ್ಲಿನ ಸರ್ಕಾರದೊಂದಿಗೆ ಸಮನ್ವಯ ಸಾಧಿಸಲು ಭಾರತ ಸಿದ್ಧವಾಗಿದೆ" ಎಂದು ಭಾರತದ ರಾಯಭಾರಿ ಟಿಎಸ್ ತಿರುಮೂರ್ತಿ(India's Ambassador to the UN) ಹೇಳಿದ್ದಾರೆ.
ಇದನ್ನೂ ಓದಿ:ಅಮೆರಿಕದಲ್ಲಿ ಗುಂಡಿನ ದಾಳಿ; ಖ್ಯಾತ ರಾಪರ್ ಯಂಗ್ ಡಾಲ್ಫ್ ಸಾವು