ಶ್ರೀನಗರ(ಜಮ್ಮು ಕಾಶ್ಮೀರ): ಗಡಿಯಲ್ಲಿ ಶಾಂತಿ ಮತ್ತು ಸಾಮರಸ್ಯ ಕಾಪಾಡುವ ದೃಷ್ಟಿಯಿಂದ ಈ ಬಾರಿಯ ದೀಪಾವಳಿಗೆ ಭಾರತ ಮತ್ತು ಪಾಕಿಸ್ತಾನ ಸೇನೆಗಳು ಪರಸ್ಪರ ಸಿಹಿಯನ್ನು ಹಂಚಿಕೊಂಡಿವೆ. ಈ ಕುರಿತು ರಕ್ಷಣಾ ಇಲಾಖೆ ಪಿಆರ್ಒ ಮಾಹಿತಿ ಹಂಚಿಕೊಂಡಿದ್ದಾರೆ.
ಗಡಿಯಲ್ಲಿ ದೀಪಾವಳಿ ಸಂಭ್ರಮ: ಪರಸ್ಪರ ಸಿಹಿ ಹಂಚಿಕೊಂಡ ಭಾರತ-ಪಾಕ್ - ಭಾರತೀಯ ಸೇನೆಯಿಂದ ದೀಪಾವಳಿ ಆಚರಣೆ
ಭಾರತೀಯ ಸೇನೆ ಗಡಿ ನಿಯಂತ್ರಣ ರೇಖೆಯಲ್ಲಿ ದೀಪಾವಳಿ ಆಚರಿಸಿದ್ದು, ಪಾಕ್ ಸೇನೆಯೊಂದಿಗೆ ಪರಸ್ಪರ ಸಿಹಿ ಹಂಚಿಕೊಳ್ಳಲಾಗಿದೆ.
ಗಡಿಯಲ್ಲಿ ದೀಪಾವಳಿ ಸಂಭ್ರಮ: ಪರಸ್ಪರ ಸಿಹಿ ಹಂಚಿಕೊಂಡ ಭಾರತ, ಪಾಕ್
ಕುಪ್ವಾರಾದ ಕಿಶನ್ಗಂಗಾ ನದಿಯ ಕಮನ್ ಅಮನ್ ಸೇತು ಬಳಿ ಸಿಹಿಯನ್ನು ಹಂಚಿಕೊಂಡಿದ್ದು, ಎರಡೂ ರಾಷ್ಟ್ರಗಳು ಶಿಸ್ತಿನ ಕದನ ವಿರಾಮ ಅನುಸರಿಸುತ್ತಿರುವ ಕಾರಣದಿಂದ ಈ ರೀತಿ ದೀಪಾವಳಿಗೆ ಪರಸ್ಪರ ಶುಭಕೋರಿ ಸಿಹಿ ಹಂಚಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಶಾಮನೂರು ಒಡೆತನದ ನಿರ್ಮಾಣ ಹಂತದ ಕಾರ್ಖಾನೆ ಕಟ್ಟಡದ ಪಿಲ್ಲರ್ ಕುಸಿತ; ಮೂವರು ಕಾರ್ಮಿಕರು ಸಾವು