ಕರ್ನಾಟಕ

karnataka

ETV Bharat / bharat

ಫ್ರಾನ್ಸ್‌ನಲ್ಲಿ ಭಾರತದ ಯುಪಿಐ ಬಳಕೆ, ವಿದ್ಯಾರ್ಥಿಗಳಿಗೆ 5 ವರ್ಷದ ದೀರ್ಘಾವಧಿಯ ಪೋಸ್ಟ್‌ ಸ್ಟಡಿ ವೀಸಾ ಸೌಲಭ್ಯ: ಪ್ರಧಾನಿ ಮೋದಿ - ಪೋಸ್ಟ್‌ ಸ್ಟಡಿ ವೀಸಾ

ಫ್ರಾನ್ಸ್‌ನಲ್ಲಿ ಭಾರತದ ಯುಪಿಐ ಬಳಕೆಗೆ ಒಪ್ಪಂದ. ಪ್ಯಾರಿಸ್​ನಲ್ಲಿ ವಿದ್ಯಾರ್ಥಿಗಳಿಗೆ 5 ವರ್ಷದ ದೀರ್ಘಾವಧಿಯ ಪೋಸ್ಟ್‌ ಸ್ಟಡಿ ವೀಸಾ ನೀಡುವ ಬಗ್ಗೆ ಪ್ರಧಾನಿ ಮೋದಿ ಘೊಷಣೆ.

PM Modi
ಮೋದಿ

By

Published : Jul 14, 2023, 8:56 AM IST

Updated : Jul 14, 2023, 10:24 AM IST

ಪ್ಯಾರಿಸ್ (ಫ್ರಾನ್ಸ್): ಫ್ರಾನ್ಸ್​ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅನೇಕ ವಿಚಾರಗಳ ಕುರಿತು ಚರ್ಚೆ ನಡೆಸಿದರು. ಜೊತೆಗೆ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಪಾವತಿ ಕಾರ್ಯವಿಧಾನವನ್ನು ಬಳಸಲು ಭಾರತ, ಫ್ರಾನ್ಸ್ ಒಪ್ಪಂದ ಮಾಡಿಕೊಂಡಿವೆ. ಈ ಒಪ್ಪಂದದ ಮೂಲದ ಫ್ರಾನ್ಸ್‌ನಲ್ಲಿರುವ ಭಾರತೀಯ ಪ್ರವಾಸಿಗರು ಮುಂದಿನ ದಿನಗಳಲ್ಲಿ ರೂಪಾಯಿಗಳಲ್ಲಿ ವ್ಯವಹಾರ ಮಾಡಲು ಸಾಧ್ಯವಾಗುತ್ತದೆ. ಇದು ಐಫೆಲ್ ಟವರ್‌ನಿಂದ ಪ್ರಾರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಘೋಷಿಸಿದ್ದಾರೆ.

ಪ್ಯಾರಿಸ್‌ನ ಲಾ ಸೀನ್ ಮ್ಯೂಸಿಕೇಲ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಭಾರತದ UPI ಅಥವಾ ಇತರೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ದೇಶದಲ್ಲಿ ದೊಡ್ಡ ಸಾಮಾಜಿಕ ಪರಿವರ್ತನೆಯನ್ನು ತಂದಿವೆ. ಡಿಜಿಟಲ್‌ ಮೂಲಸೌಕರ್ಯ ಬಳಕೆಗೆ ಸಂಬಂಧಿಸಿದಂತೆ ಭಾರತ ಮತ್ತು ಫ್ರಾನ್ಸ್ ಒಟ್ಟಿಗೆ ಕೆಲಸ ಮಾಡಲು ಮುಂದಾಗಿದ್ದು, ಫ್ರಾನ್ಸ್‌ನಲ್ಲಿ UPI ಬಳಸಲು ಒಪ್ಪಿಕೊಂಡು ಒಪ್ಪಂದ ಮಾಡಿಕೊಳ್ಳಲಾಗಿದೆ. ಹೀಗಾಗಿ, ಭಾರತೀಯ ಪ್ರವಾಸಿಗರು ಈಗ ಯುಪಿಐ ಮೂಲಕ ಐಫೆಲ್ ಟವರ್‌ನಲ್ಲಿ ರೂಪಾಯಿಗಳಲ್ಲಿ ಪಾವತಿ ಮಾಡಲು ಸಾಧ್ಯವಾಗುತ್ತದೆ " ಎಂದರು.

ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಭಾರತದ ಮೊಬೈಲ್ ಆಧಾರಿತ ಪಾವತಿ ವ್ಯವಸ್ಥೆಯಾಗಿದೆ. ಈ ವರ್ಷದ ಆರಂಭದಲ್ಲಿ UPI ಮತ್ತು ಸಿಂಗಾಪುರದ ' PayNow ' ಎರಡೂ ದೇಶಗಳ ಬಳಕೆದಾರರಿಗೆ ಗಡಿಯಾಚೆಗಿನ ವಹಿವಾಟುಗಳನ್ನು ಮಾಡಲು ಅನುಕೂಲವಾಗುವಂತೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಇದೀಗ ಫ್ರಾನ್ಸ್ ಜೊತೆಗಿನ ಈ ಒಪ್ಪಂದವು ಸಹ ಭಾರತ ಮತ್ತು ಫ್ರಾನ್ಸ್ ನಡುವಿನ ದ್ವಿಪಕ್ಷೀಯ ವ್ಯಾಪಾರ ಮತ್ತು ಪ್ರವಾಸೋದ್ಯಮ ಬೆಳವಣಿಗೆಗೆ ಅನುಕೂಲವಾಗಲಿದೆ. ಡಿಜಿಟಲ್ ಮೂಲಸೌಕರ್ಯವು ಎರಡು ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸುತ್ತದೆ. ಭಾರತ ಮತ್ತು ಫ್ರಾನ್ಸ್ ದೀರ್ಘಕಾಲದಿಂದ ಪುರಾತತ್ವ ಕಾರ್ಯಾಚರಣೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ" ಎಂದು ಮೋದಿ ಹೇಳಿದರು.

ಇದನ್ನೂ ಓದಿ :Watch.. ಪ್ಯಾರಿಸ್​ಗೆ ಬಂದಿಳಿದ ಪ್ರಧಾನಿ ಮೋದಿ : ವಿಮಾನ ನಿಲ್ದಾಣಕ್ಕೆ ಬಂದು ಸ್ವಾಗತಿಸಿದ ಫ್ರಾನ್ಸ್ ಪಿಎಂ..

5 ವರ್ಷದ ದೀರ್ಘ ಅವಧಿಯ ಪೋಸ್ಟ್‌ ಸ್ಟಡಿ ವೀಸಾ : ಫ್ರಾನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ಈಗ ಐದು ವರ್ಷಗಳ ದೀರ್ಘಾವಧಿಯ ಅಧ್ಯಯನ ವೀಸಾವನ್ನು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಇದೇ ವೇಳೆ ತಿಳಿಸಿದರು. ಈ ಹಿಂದೆ ಭಾರತೀಯ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಕೆಲಸದ ವೀಸಾ ನೀಡಲಾಗುತ್ತಿತ್ತು.

ಎರಡು ದಿನಗಳ ಅಧಿಕೃತ ಭೇಟಿಗಾಗಿ ಗುರುವಾರ ಪ್ಯಾರಿಸ್‌ಗೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ವಿಮಾನ ನಿಲ್ದಾಣದಲ್ಲಿ ವಿಧ್ಯುಕ್ತ ಸ್ವಾಗತ ಕೋರಲಾಯಿತು. ಫ್ರಾನ್ಸ್ ಪ್ರಧಾನಿ ಎಲಿಸಬೆತ್ ಬೋರ್ನ್ ಅವರು ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡರು.

ಇದನ್ನೂ ಓದಿ :PM Modi France Tour : ಪ್ರಧಾನಿ ನರೇಂದ್ರ ಮೋದಿಗೆ ಫ್ರಾನ್ಸ್​ನ ಅತ್ಯುನ್ನತ ಗೌರವ

Last Updated : Jul 14, 2023, 10:24 AM IST

ABOUT THE AUTHOR

...view details