ನವದೆಹಲಿ:ಜಿ20 ಶೃಂಗಸಭೆಯನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಿದ ಭಾರತ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಗ್ಲೋಬಲ್ ಸೌತ್ (ಜಾಗತಿಕ ದಕ್ಷಿಣ) ಬಗ್ಗೆ ಜಿ20ಯಲ್ಲಿ ಪ್ರಸ್ತಾಪಿಸಿದ್ದು, ಚರ್ಚೆಗೆ ಗ್ರಾಸವಾಗಿದೆ. ಅಲಿಪ್ತ ರಾಷ್ಟ್ರಗಳ ಗುಂಪಿನ ಭಾರತವು ಯಾವಾಗಲೂ ಅಭಿವೃದ್ಧಿಶೀಲ ರಾಷ್ಟ್ರಗಳ ಧ್ವನಿಯಾಗಿದೆ. ಗ್ಲೋಬಲ್ ಸೌತ್ ಪರಿಕಲ್ಪನೆಯು ಹಳೆಯದಾಗಿದೆ. ಕೇಂದ್ರ ಸರ್ಕಾರ ಜಿ 20 ಅಧ್ಯಕ್ಷತೆಯನ್ನು ದೊಡ್ಡದಾಗಿ ಬಿಂಬಿಸಿದೆ ಎಂದು ಕಾಂಗ್ರೆಸ್ ಭಾನುವಾರ ಟೀಕಿಸಿದೆ.
ಈ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿರುವ ಕಾಂಗ್ರೆಸ್ ನಾಯಕ ಸಲ್ಮಾನ್ ಸೋಜ್, ಜಿ20 ನಾಯಕತ್ವದ ವಿಚಾರದಲ್ಲಿ ಕೇಂದ್ರ ಸರ್ಕಾರ ಹೆಚ್ಚಾಗಿ ನಡೆದುಕೊಂಡಿದೆ. ಕಳೆದ ವರ್ಷ ಇಂಡೋನೇಷ್ಯಾ ಜಿ 20 ನಾಯಕತ್ವ ವಹಿಸಿತ್ತು. ಮುಂದಿನ ವರ್ಷ ಬ್ರೆಜಿಲ್ ಅಧಿಕಾರ ವಹಿಸಿಕೊಳ್ಳಲಿದೆ. ಹೀಗಾಗಿ ಅದರಲ್ಲಿ ವಿಶೇಷವೇನಿಲ್ಲ. ಹಿಂದೆ ಅಮೆರಿಕ ಮತ್ತು ಕೆನಡಾ ಗುಂಪನ್ನು ಮುನ್ನಡೆಸಿದ್ದವು. ಭವಿಷ್ಯದಲ್ಲಿ ಚೀನಾ ಕೂಡ ಅಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.
ಭಾರತ ಅಭಿವೃದ್ಧಿ ರಾಷ್ಟ್ರಗಳ ದನಿ:ಇನ್ನು, ಗ್ಲೋಬಲ್ ಸೌತ್ ವಿಚಾರಕ್ಕೆ ಬಂದರೆ, ದಕ್ಷಿಣ ಗೋಳಾರ್ಧದಲ್ಲಿ ಬರುವ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಅಭಿವೃದ್ಧಿಶೀಲ ದೇಶಗಳಾಗಿವೆ. ಅವುಗಳ ಪರವಾಗಿ ಭಾರತ ಯಾವಾಗಲೂ ದನಿ ಎತ್ತುತ್ತದೆ. ಜಾಗತಿಕ ದಕ್ಷಿಣದಲ್ಲಿ ಭಾರತ ಪ್ರಮುಖ ರಾಷ್ಟ್ರವಾಗಿದೆ. ಚೀನಾ ಕೂಡ ಇನ್ನೊಂದು ಪ್ರಬಲ ರಾಷ್ಟ್ರವಾಗಿದೆ. ಆದರೂ, ಅಭಿವೃದ್ಧಿಶೀಲ ರಾಷ್ಟ್ರಗಳ ಧ್ವನಿಯಾಗುವ ಭಾರತ ದನಿಯನ್ನು ಕುಂದಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.