ಕರ್ನಾಟಕ

karnataka

ETV Bharat / bharat

ಸೀಟು ಹಂಚಿಕೆ ಅಡೆತಡೆಗಳ ನಡುವೆಯೇ ಇಂದು ಇಂಡಿಯಾ ಮೈತ್ರಿಕೂಟ ನಾಯಕರ ವರ್ಚುವಲ್​ ಸಭೆ - ಮೈತ್ರಿಕೂಟ ನಾಯಕರ ವರ್ಚ್ಯುವಲ್​ ಸಭೆ

ಸೀಟು ಹಂಚಿಕೆ ಅಡೆತಡೆಗಳ ನಡುವೆಯೇ ಇಂದು ಇಂಡಿಯಾ ಮೈತ್ರಿಕೂಟ ನಾಯಕರ ವರ್ಚುವಲ್​ ಸಭೆ ನಡೆಯಲಿದೆ. ಈ ಸಭೆ ಹಲವು ಸಮಸ್ಯೆಗಳನ್ನು ಬಗೆಹರಿಸುವ ಸಾಧ್ಯತೆ ಹೆಚ್ಚಿದೆ. ಜೊತೆಗೆ ಲೋಕಸಭೆ ಚುನಾವಣೆಯ ಭವಿಷ್ಯದ ಹಿನ್ನೆಲೆ ನಾಯಕರು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಯು ಕೂಡ ಇದೆ.

INDIA alliance leaders  Seat sharing  India bloc  ಇಂಡಿಯಾ ಮೈತ್ರಿಕೂಟ  ಮೈತ್ರಿಕೂಟ ನಾಯಕರ ವರ್ಚ್ಯುವಲ್​ ಸಭೆ  ವರ್ಚ್ಯುವಲ್​ ಸಭೆ
ಸೀಟು ಹಂಚಿಕೆ ಅಡೆತಡೆಗಳ ನಡುವೆಯೇ ನಾಳೆ ಇಂಡಿಯಾ ಮೈತ್ರಿಕೂಟ ನಾಯಕರ ವರ್ಚ್ಯುವಲ್​ ಸಭೆ

By ETV Bharat Karnataka Team

Published : Jan 13, 2024, 6:38 AM IST

ನವದೆಹಲಿ: ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಪಂಜಾಬ್ ಮತ್ತು ದೆಹಲಿಯಂತಹ ರಾಜ್ಯಗಳಲ್ಲಿ ಸೀಟು ಹಂಚಿಕೆ ಅಡೆತಡೆಗಳ ಮಧ್ಯೆಯೇ ಇಂದು ಇಂಡಿಯಾ ಮೈತ್ರಿಕೂಟ ವರ್ಚುವಲ್ ಸಭೆ ಕರೆದಿದೆ. ಈ ಸಭೆಯಲ್ಲಿ ಸೀಟು ಹಂಚಿಕೆ ಸೇರಿ ಹಲವು ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಭವಿಷ್ಯದ ಕ್ರಿಯಾ ಯೋಜನೆಯನ್ನು ಚರ್ಚೆಯಾಗುವ ಸಾಧ್ಯತೆ ಇದೆ.

"ಜನವರಿ 13 ರಂದು ಭಾರತ ಮೈತ್ರಿಕೂಟದ ಸಭೆ ನಡೆಯಲಿದೆ. ಸುಮಾರು 14 ಪಕ್ಷದ ನಾಯಕರು ವರ್ಚುವಲ್​ ಅಧಿವೇಶನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಭೆಯಲ್ಲಿ ಹಲವಾರು ಪ್ರಮುಖ ವಿಷಯಗಳು ಮತ್ತು ಭವಿಷ್ಯದ ಮಾರ್ಗಸೂಚಿಯನ್ನು ಚರ್ಚಿಸುವ ಸಾಧ್ಯತೆಯಿದೆ" ಎಂದು ಹಿರಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪದಾಧಿಕಾರಿಗಳು ಹೇಳಿದರು.

ಪಕ್ಷದ ಪದಾಧಿಕಾರಿಗಳ ಪ್ರಕಾರ, ಕಾಂಗ್ರೆಸ್‌ನ ಐದು ಸದಸ್ಯರ ರಾಷ್ಟ್ರೀಯ ಮೈತ್ರಿ ಸಮಿತಿಯು ಸಮಾಜವಾದಿ ಪಕ್ಷ (ಎಸ್‌ಪಿ), ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ), ಆಮ್ ಆದ್ಮಿ ಪಕ್ಷ, ಶಿವಸೇನೆ ಯುಬಿಟಿ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಂತಹ ಹಲವಾರು ಪ್ರಾದೇಶಿಕ ಪಕ್ಷಗಳನ್ನು ಭೇಟಿ ಮಾಡಿದೆ. ಸೀಟು ಹಂಚಿಕೆ ಯೋಜನೆಯನ್ನು ದೃಢಪಡಿಸಲು ತೃಣಮೂಲ ಕಾಂಗ್ರೆಸ್ (ಟಿಎಂಸಿ), ಎಡ ಪಕ್ಷಗಳು, ಜನತಾ ದಳ-ಯುನೈಟೆಡ್ ಮತ್ತು ರಾಷ್ಟ್ರೀಯ ಜನತಾ ದಳವನ್ನು ಭೇಟಿ ಮಾಡಲು ಯೋಜಿಸಲಾಗಿತ್ತು.

ಮಹಾರಾಷ್ಟ್ರವನ್ನು ಹೊರತುಪಡಿಸಿ, ಉತ್ತರ ಪ್ರದೇಶ, ಪಂಜಾಬ್ ಮತ್ತು ದೆಹಲಿಯಲ್ಲಿ ನಡೆದ ಮಾತುಕತೆಗಳಲ್ಲಿ ಯಾವುದೇ ಅಂತಿಮವಾಗಿಲ್ಲ. ಆದರೆ, ಅವರ ಉದ್ದೇಶಿತ ಮೈತ್ರಿ ಸಭೆಗೆ ಮುಂಚಿತವಾಗಿ ಕಾಂಗ್ರೆಸ್ ಮತ್ತು ಟಿಎಂಸಿ ನಡುವೆ ಭಿನ್ನಾಭಿಪ್ರಾಯ ಹೆಚ್ಚಿದ್ದು, ದಿನಾಂಕವನ್ನು ಇನ್ನೂ ನಿಗದಿಪಡಿಸಲಾಗಿಲ್ಲ. ಪಕ್ಷದ ಮೂಲಗಳ ಪ್ರಕಾರ, ಉತ್ತರ ಪ್ರದೇಶಕ್ಕಾಗಿ ಎಸ್‌ಪಿ ಮತ್ತು ಆರ್‌ಎಲ್‌ಡಿ ಜೊತೆಗಿನ ಸಭೆಯನ್ನು ಜನವರಿ 12 ರಂದು ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಕಾಂಗ್ರೆಸ್ ಪಕ್ಷ ಅಥವಾ ಎಸ್‌ಪಿ ಸಿದ್ಧವಾಗಿಲ್ಲದ ಕಾರಣ ಈ ಸಭೆಯನ್ನು ಮುಂದೂಡಬೇಕಾಯಿತು.

ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು, ಬಿಎಸ್​ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರನ್ನು ವಿರೋಧ ಪಕ್ಷದ ಮೈತ್ರಿಗೆ ಸೇರುವಂತೆ ಮನವೊಲಿಸಲು ಮತ್ತು ಅವರಿಗೆ 30 ಸಂಸದೀಯ ಸ್ಥಾನಗಳನ್ನು ನೀಡಲು ಒಪ್ಪಿಸಿದ್ದರು. ಒಂದು ವೇಳೇ, ಮಾಯಾವತಿ ಹೊರಗುಳಿಯಲು ಬಯಸಿದರೆ, ಎಸ್‌ಪಿ ಸುಮಾರು 50 ಸ್ಥಾನಗಳನ್ನು, ಕಾಂಗ್ರೆಸ್ 20 ಮತ್ತು ಆರ್‌ಎಲ್‌ಡಿ 5 ಸ್ಥಾನಗಳನ್ನು ಪಡೆಯಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಜನವರಿ 15ರ ನಂತರ ಯುಪಿ ಮೈತ್ರಿ ಕುರಿತು ಮುಂದಿನ ಸಭೆಯನ್ನು ನಿರೀಕ್ಷಿಸಲಾಗಿದೆ ಎಂದು ಪಕ್ಷದ ಆಂತರಿಕ ಮೂಲಗಳು ಹೇಳಿವೆ.

ಪಶ್ಚಿಮ ಬಂಗಾಳದಲ್ಲಿ, ಕೇಂದ್ರದ ಯುಪಿಎ ಸರ್ಕಾರದ ಅವಧಿಯಲ್ಲಿ ಆರು ಸ್ಥಾನಗಳನ್ನು ಗೆದ್ದಿದ್ದ ಹಳೆಯ ಪಕ್ಷಕ್ಕೆ ಆಡಳಿತಾರೂಢ ಟಿಎಂಸಿ 42 ಸಂಸದೀಯ ಸ್ಥಾನಗಳಲ್ಲಿ 2 ಸ್ಥಾನಗಳನ್ನು ಮಾತ್ರ ನೀಡುತ್ತಿದೆ ಎಂದು ಕಾಂಗ್ರೆಸ್ ವ್ಯವಸ್ಥಾಪಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"2019 ರಲ್ಲಿ ನಾವು ಎರಡು ಸ್ಥಾನ ಗೆದ್ದಿದ್ದೇವೆ. ಹಿಂದೆ, ನಾವು ಯುಪಿಎ ಸರ್ಕಾರದ ಅವಧಿಯಲ್ಲಿ ಆರು ಸ್ಥಾನಗಳನ್ನು ಗೆದ್ದಿದ್ದೇವೆ. ಬಂಗಾಳ ಕಾಂಗ್ರೆಸ್ ಹಲವಾರು ಜಿಲ್ಲೆಗಳಲ್ಲಿ ಅಸ್ತಿತ್ವ ಸಾಧಿಸಿದ್ದೆವು. ಈ ಬಾರಿ ಹೆಚ್ಚು ಸೀಟುಗಳನ್ನು ಪಡೆಯಬೇಕು. ಆದರೆ, ಈ ವಿಷಯವನ್ನು ಹೈಕಮಾಂಡ್ ನಿರ್ಧರಿಸುತ್ತದೆ'' ಎಂದು ಪಶ್ಚಿಮ ಬಂಗಾಳದ ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಬಿಪಿ ಸಿಂಗ್ ಈಟಿವಿ ಭಾರತಕ್ಕೆ ತಿಳಿಸಿದರು.

ಪಕ್ಷದ ಮೂಲಗಳ ಪ್ರಕಾರ, ಟಿಎಂಸಿಯು ಮೇಘಾಲಯ, ಅಸ್ಸೋಂನಲ್ಲಿಯೂ ಕನಿಷ್ಠ ಒಂದು ಸ್ಥಾನದ ಬೇಡಿಕೆಯನ್ನು ಇಟ್ಟಿದೆ. ಎಎಪಿ ದೆಹಲಿ ಮತ್ತು ಪಂಜಾಬ್‌ನ ಆಚೆಗೆ ಇನ್ನೂ ಮೂರು ರಾಜ್ಯಗಳಲ್ಲಿ ಸ್ಥಾನಗಳನ್ನು ಕೇಳುತ್ತಿದೆ. ಇದು ಕಾಂಗ್ರೆಸ್ ವ್ಯವಸ್ಥಾಪಕರನ್ನು ಅಸಮಾಧಾನಗೊಳಿಸಿದೆ. ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲು, ರಾಜ್ಯದ ಎಲ್ಲಾ 13 ಲೋಕಸಭಾ ಸ್ಥಾನಗಳನ್ನು ಎಎಪಿ ಗೆಲ್ಲುತ್ತದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿರುವುದು ಕಾಂಗ್ರೆಸ್ ವ್ಯವಸ್ಥಾಪಕರನ್ನು ಮತ್ತಷ್ಟು ಕೆರಳಿಸಿದೆ.

ಇದನ್ನೂ ಓದಿ:ಮಗು ಕೊಲೆ ಕೇಸ್: ಪ್ರಮುಖ ಪುರಾವೆಯಾಗಿ ಐಲೈನರ್ ನಿಂದ ಗೀಚಲಾದ ಟಿಪ್ಪಣಿ ಪತ್ತೆ

ABOUT THE AUTHOR

...view details