ಕರ್ನಾಟಕ

karnataka

ETV Bharat / bharat

70 ವರ್ಷಗಳ ಬಳಿಕ ಚಿರತೆಗಳ ಸ್ವಾಗತಕ್ಕೆ ಸಜ್ಜಾದ ಭಾರತ - ಮಧ್ಯಪ್ರದೇಶದ ಕುನೋ ವನ್ಯಜೀವಿ ಅಭಯಾರಣ್ಯ

ಚಿರತೆ ಅಳಿವಿನಂಚಿನಲ್ಲಿರುವ ಪ್ರಾಣಿ ಎಂದು ಭಾರತದಲ್ಲಿ ಘೋಷಿಸಿದ 70 ವರ್ಷಗಳ ನಂತರ ವಿದೇಶದಿಂದ ಚಿರತೆಗಳನ್ನು ತರಲಾಗುತ್ತಿದೆ.

India all set to welcome cheetahs after 70 years
70 ವರ್ಷಗಳ ಬಳಿಕ ಚಿರತೆಗಳ ಸ್ವಾಗತಕ್ಕೆ ಸಜ್ಜಾದ ಭಾರತ

By

Published : May 21, 2021, 8:16 AM IST

ಭೋಪಾಲ್ (ಮಧ್ಯಪ್ರದೇಶ): ಭಾರತದಲ್ಲಿ ಚಿರತೆ ಅಳಿವಿನಂಚಿನಲ್ಲಿದೆ ಎಂದು ಘೋಷಿಸಿ ಸುಮಾರು 70 ವರ್ಷಗಳ ನಂತರ ಈ ವರ್ಷ ದಕ್ಷಿಣ ಆಫ್ರಿಕಾದಿಂದ ಚೀತಾಗಳ ಹಿಂಡೇ ದೇಶಕ್ಕೆ ಆಗಮಿಸುತ್ತಿದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ದಕ್ಷಿಣ ಆಫ್ರಿಕಾದಿಂದ ಚಿರತೆಗಳನ್ನು ಆಮದು ಮಾಡಿಕೊಳ್ಳಲು ಮತ್ತು ಅವುಗಳನ್ನು ಮಧ್ಯಪ್ರದೇಶದ ಕುನೋ ವನ್ಯಜೀವಿ ಅಭಯಾರಣ್ಯಕ್ಕೆ ನೀಡಲು ಒಪ್ಪಿಗೆ ನೀಡಿದೆ.

ಆಗಸ್ಟ್ ಒಳಗಾಗಿ ಕುನೋದಲ್ಲಿ ವಿಶೇಷ ಆವರಣಗಳನ್ನು ನಿರ್ಮಿಸುವಂತೆ ಅರಣ್ಯ ಇಲಾಖೆಗೆ ಎನ್‌ಟಿಸಿಎ ನಿರ್ದೇಶನ ನೀಡಿದ್ದು, ನವೆಂಬರ್ ಅಂತ್ಯದ ವೇಳೆಗೆ ಮೊದಲ ಬ್ಯಾಚ್​ನಲ್ಲಿ 14 ಚಿರತೆಗಳು ಭಾರತಕ್ಕೆ ಬರಲಿವೆ. 14 ಕೋಟಿ ರೂ. ನೀಡಿ 14 ಚಿರತೆಗಳನ್ನು ತರಲಾಗುತ್ತಿದೆ.

70 ವರ್ಷಗಳ ಬಳಿಕ..

ಚಿರತೆಗಳ ಸಂತತಿ ಕಡಿಮೆಯಾಗುತ್ತಾ ಬಂದಾಗ 1952ರಲ್ಲಿ ಚಿರತೆಯನ್ನು ಭಾರತದಲ್ಲಿ ಅಳಿವಿನಂಚಿನ ಪ್ರಾಣಿ ಎಂದು ಘೋಷಿಸಲಾಯಿತು. 2020ರಲ್ಲಿ ದೇಶದ ಚಿರತೆಗಳ ಸಂಖ್ಯೆ ಶೇ. 75-90ರಷ್ಟು ಇಳಿಕೆಯಾಗಿರುವುದು ವನ್ಯಜೀವಿ ಅಧ್ಯಯನ ಕೇಂದ್ರ ಹಾಗೂ ಭಾರತದ ವನ್ಯಜೀವಿ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದಿತ್ತು. 2020ರ ಜನವರಿಯಲ್ಲಿ ಚಿರತೆಗಳನ್ನು ಆಮದು ಮಾಡಿಕೊಳ್ಳಲು ಸುಪ್ರೀಂ ಕೋರ್ಟ್ ಅನುಮತಿ ನೀಡಿ, ಇದರ ಮೇಲ್ವಿಚಾರಣೆಯನ್ನು ಸಮಿತಿಯೊಂದಕ್ಕೆ ಹಸ್ತಾಂತರಿಸಿತ್ತು.

ಇದನ್ನೂ ಓದಿ: 11 ವರ್ಷಗಳಿಂದ ಬೀದಿ ನಾಯಿಗಳಿಗೆ ಬಿರಿಯಾನಿ ನೀಡುತ್ತಿರುವ ರಂಜಿತ್​ ದಾದಾ!

ಇದೀಗ ಅಳಿವಿನಂಚಿನ ಪ್ರಾಣಿ ಎಂದು ಘೋಷಿಸಿದ 70 ವರ್ಷಗಳ ಬಳಿಕ ಚಿರತೆಗಳನ್ನು ವಿದೇಶದಿಂದ ತರಲಾಗುತ್ತಿದೆ. ಡೆಹ್ರಾಡೂನ್‌ನ ಭಾರತದ ವನ್ಯಜೀವಿ ಸಂಸ್ಥೆಯ ತಜ್ಞರು ಆಮದು ಮಾಡಿಕೊಳ್ಳುತ್ತಿರುವ ಚಿರತೆಗಳಿಗೆ ಕುನೋ ಅತ್ಯಂತ ಸೂಕ್ತವಾದ ಸ್ಥಳವೆಂದು ಭಾವಿಸಿದ್ದಾರೆ. ಕುನೋಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ದಕ್ಷಿಣ ಆಫ್ರಿಕಾದ ತಜ್ಞರು ಕೂಡ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ.

ABOUT THE AUTHOR

...view details