- ಕೃಷಿ ಕ್ಷೇತ್ರದಲ್ಲಿ ನಮ್ಮ ರೈತರು ಪ್ರಗತಿ ಸಾಧಿಸುತ್ತಿದ್ದಾರೆ
- ರೈತರು ವಿಶ್ವಕ್ಕೆ ಆಹಾರ ಧಾನ್ಯಗಳನ್ನು ರಫ್ತು ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ
- ಭಾರತೀಯ ಶ್ರಮಜೀವಿಗಳು ಬೆವರು ಸುರಿಸಿ ರಾಷ್ಟ್ರದ ಸಂಪತ್ತನ್ನು ಹೆಚ್ಚಿಸುತ್ತಿದ್ದಾರೆ
- ಸಣ್ಣ ಕೈಗಾರಿಕೆಗಳು ಮತ್ತು ಸಣ್ಣ ಉದ್ಯಮಗಳು ಹೊಸ ಶಕೆಯನ್ನು ಕಾಣುತ್ತಿವೆ
- ಭಾರತೀಯರು ಭವಿಷ್ಯದಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ
- ಭಾರತದ ಮೇಲೆ ವಿಶ್ವದ ವಿಶ್ವಾಸವೂ ಹೆಚ್ಚಿದೆ
- ಜಗತ್ತು ನಮ್ಮತ್ತ ನೋಡುತ್ತಿರುವುದು ಇಡೀ ರಾಷ್ಟ್ರದ ಶ್ರಮದ ಫಲ
ಮಣಿಪುರ ವಿಷಯ ಪ್ರಸ್ತಾಪಿಸಿದ ಪ್ರಧಾನಿ... ಶಾಂತಿ ಕಾಪಾಡಲು ಜನರಲ್ಲಿ ಮೋದಿ ಮನವಿ - undefined
08:04 August 15
ಕೃಷಿ ಕ್ಷೇತ್ರದಲ್ಲಿ ರೈತರು ಪ್ರಗತಿ ಸಾಧಿಸುತ್ತಿದ್ದಾರೆ- ಮೋದಿ
08:02 August 15
ಕೊರೊನಾ ಬಳಿಕ ಇಡೀ ವಿಶ್ವವೇ ಭಾರತವನ್ನು ಗೌರವಿಸುತ್ತಿದೆ-ಮೋದಿ
- ಕೊರೊನಾ ಕಾಲದಲ್ಲಿ ದೇಶ ನಡೆದ ಬಗ್ಗೆ ವಿಶ್ವವೇ ಬೆರಗಾಗಿದೆ
- ಮಾನವೀಯ ಸಂವೇದನೆಯಿಂದ ನಡೆದುಕೊಳ್ಳಬೇಕಿದೆ
- ಅದನ್ನು ಕೊರೊನಾ ಸೋಂಕು ನಮಗೆ ತಿಳಿಸಿಕೊಟ್ಟಿದೆ
- ಕೊರೊನಾ ಬಳಿಕ ಇಡೀ ವಿಶ್ವವೇ ಭಾರತವನ್ನು ಗೌರವಿಸುತ್ತಿದೆ
- ನಮ್ಮ ಸರ್ಕಾರದ ನೀತಿಗಳು ದೇಶದ ಅಭಿವೃದ್ಧಿ ಪರವಾಗಿವೆ
07:48 August 15
ಭಾರತ ವಿಶ್ವಗುರುವಾಗುವ ಕಾಲ ಬಂದಿದೆ, ಬಳಸಿಕೊಳ್ಳಲು ಪ್ರಧಾನಿ ಕರೆ
- ಭಾರತ ವಿಶ್ವಗುರುವಾಗುವ ಕಾಲ ಬಂದಿದೆ
- ಯುವ ಶಕ್ತಿಯಿಂದಲೇ ದೇಶದ ಪ್ರಗತಿ ಸಾಧ್ಯ
- ಅಂಥದ್ದೊಂದು ಅವಕಾಶವನ್ನು ಬಳಸಿಕೊಳ್ಳಬೇಕಿದೆ
- ದೇಶದ ಯುವಕರು ಇದನ್ನು ಸಾಕಾರ ಮಾಡುವರು ಎಂಬ ನಿರೀಕ್ಷೆ ಇದೆ
07:44 August 15
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೊಡುಗೆ ನೀಡಿದ ಎಲ್ಲ ವೀರರಿಗೆ ಮೋದಿ ನಮನ
- ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ, ಜನಸಂಖ್ಯೆಯಲ್ಲಿ ದೇಶ ಮುಂಚೂಣಿ
- ದೊಡ್ಡ ದೇಶ, 140 ಕೋಟಿ ಜನರಿಗೆ ಸ್ವಾತಂತ್ರ್ಯ ದಿನದ ಶುಭಾಶಯಗಳು
- ಇಡೀ ದೇಶ ಸ್ವಾತಂತ್ರ್ಯದ ಸಂಭ್ರಮದಲ್ಲಿದೆ
- ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೊಡುಗೆ ನೀಡಿದ ಎಲ್ಲ ವೀರರಿಗೆ ನಮನ
- ಹಿಮಾಚಲಪ್ರದೇಶ, ಉತ್ತರಾಖಂಡದಲ್ಲಿನ ವಿಕೋಪ ನೆನೆದ ಪ್ರಧಾನಿ
- ನೈಸರ್ಗಿಕ ವಿಕೋಪವು ದೇಶದ ಹಲವು ಭಾಗದಲ್ಲಿ ಸಂಕಷ್ಟ ಸೃಷ್ಟಿಸಿದೆ
- ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ಬೆಂಬಲ ನೀಡಲಾಗುವುದು
07:41 August 15
ಮಣಿಪುರ ಹಿಂಸಾಚಾರ ವಿಚಾರ ಪ್ರಸ್ತಾಪಿಸಿದ ಪ್ರಧಾನಿ ಮೋದಿ
- ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಸ್ವಾತಂತ್ರ್ಯ ಭಾಷಣ ಆರಂಭ
- ದೇಶ ವಿಶ್ವದ ಬಲಿಷ್ಟ ರಾಷ್ಟ್ರಗಳ ಮಧ್ಯೆ ಮುನ್ನಡೆಯುತ್ತಿದೆ
- ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಬಲಿಷ್ಟವಾಗಿದೆ
- ಮಣಿಪುರ ವಿಚಾರವನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ
- ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಕಲಹ ನಿಲ್ಲಬೇಕಿದೆ
- ಕೇಂದ್ರ, ರಾಜ್ಯ ಸರ್ಕಾರಗಳ ಕ್ರಮದಿಂದಾಗಿ ಶಾಂತಿ ನೆಲೆಸುತ್ತಿದೆ
07:34 August 15
10ನೇ ಬಾರಿಗೆ ಕೆಂಪುಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ
- ಕೆಂಪುಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ
- ಕೋಟೆಯಲ್ಲಿ ಮೊಳಗಿದ ರಾಷ್ಟ್ರಗೀತೆ, ಪ್ರಧಾನಿ, ಗಣ್ಯರಿಂದ ನಮನ
- ಎರಡು ಮಾರ್ಕ್-3 ಹೆಲಿಕಾಪ್ಟರ್ಗಳಿಂದ ಪುಷ್ಪವೃಷ್ಟಿ
- ಭಾರತದ ತ್ರಿವರ್ಣ ಧ್ವಜ, ಉಪಸ್ಥಿತಿ ಜನರ ಮೇಲೆ ಪುಷ್ಪ
07:29 August 15
ದೇಶದ ಮೂರು ಸಶಸ್ತ್ರ ಪಡೆಗಳಿಂದ ಗೌರವ ವಂದನೆ ಪಡೆದ ಮೋದಿ
- ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಗೃಹ ಸಚಿವ ಅಮಿತ್ ಶಾ
- ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿ ಪ್ರಮುಖ ಗಣ್ಯರು ಭಾರಿ
- ದೇಶದ ಮೂರು ಸಶಸ್ತ್ರ ಪಡೆಗಳಿಂದ ಗೌರವ ವಂದನೆ ಪಡೆದ ಮೋದಿ
- ನಿಯಮಾವಳಿ ಪ್ರಕಾರ ಪ್ರಧಾನಿಯನ್ನು ಧ್ವಜಾರೋಹಣ ಸ್ಥಳಕ್ಕೆ ಕರೆದೊಯ್ದ ಸೇನಾ ಮುಖಂಡ
07:17 August 15
ಕೆಂಪುಕೋಟೆಯತ್ತ ಬಂದ ಪ್ರಧಾನಿ ನರೇಂದ್ರ ಮೋದಿ
- ಕೆಂಪುಕೋಟೆಯತ್ತ ಬಂದ ಪ್ರಧಾನಿ ನರೇಂದ್ರ ಮೋದಿ
- ಸತತ 10ನೇ ಬಾರಿಗೆ ಧ್ವಜಾರೋಹಣ ಮಾಡಲಿರುವ ಮೋದಿ
- ಸಮಾರಂಭದಲ್ಲಿ 20 ಸಾವಿರ ಗಣ್ಯರು, 10 ಸಾವಿರ ಭದ್ರತಾ ಸಿಬ್ಬಂದಿ ರಕ್ಷಣೆ
- 1800 ವಿಶೇಷ ಅತಿಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತಿ
06:13 August 15
ಅಮರಜ್ಯೋತಿ, ಮಹಾತ್ಮ ಗಾಂಧಿ ಸಮಾಧಿಗೆ ಪ್ರಧಾನಿ ನರೇಂದ್ರ ಮೋದಿ ನಮನ
ದೆಹಲಿಯಲ್ಲಿ 77ನೇ ಸ್ವಾತಂತ್ರೋತ್ಸವದ ಸಂಭ್ರಮ. 20 ಸಾವಿರ ಗಣ್ಯರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ಧ್ವಜಾರೋಹಣಕ್ಕೆ ಸಜ್ಜು.
ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ಪ್ರಧಾನಿ ಮೋದಿ
TAGGED:
Independence day event live