ನವದೆಹಲಿ: ಗಡಿಯಲ್ಲಿ ಭಯೋತ್ಪಾದಕರ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿರುವ ಮೇಜರ್ ಅರುಣ್ ಕುಮಾರ್ ಪಾಂಡೆ ಅವರಿಗೆ ಶೌರ್ಯ ಚಕ್ರ ನೀಡಿ, ಕೇಂದ್ರ ಸರ್ಕಾರ ಪ್ರಕಟಣೆ ಹೊರಡಿಸಿದೆ. ಕಳೆದ ವರ್ಷ ಜೂನ್ ತಿಂಗಳಲ್ಲಿ ಜಮ್ಮು- ಕಾಶ್ಮೀರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರ ದಾಳಿ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಇವರ ಶೌರ್ಯಕ್ಕೆ ಮೆಚ್ಚಿ ಇದೀಗ ಮಹತ್ವದ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಉಳಿದಂತೆ ಎಎಸ್ಐ ಬಾಬು ರಾಮ್ ಅವರಿಗೆ ಅಶೋಕ್ ಚಕ್ರ, ಕಾನ್ಸ್ಟೇಬಲ್ ಅಲ್ತಾಫ್ ಹುಸೇನ್ ಭಟ್ ಅವರಿಗೆ ಕೀರ್ತಿ ಚಕ್ರ ಹಾಗೂ ಎಸ್ಪಿಒ ಶಹಬಾಜ್ ಅಹ್ಮದ್ ಅವರಿಗೆ ಶೌರ್ಯ ಚಕ್ರ ಘೋಷಣೆ ಮಾಡಲಾಗಿದ್ದು, ಎಲ್ಲರಿಗೂ ಮರಣೋತ್ತರವಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ.