ಅಯೋಧ್ಯೆ (ಉತ್ತರ ಪ್ರದೇಶ):ಭಕ್ತರ ಪವಿತ್ರ ಸ್ನಾನದ ಸ್ಥಳದಲ್ಲಿ ದಂಪತಿ ಅಶ್ಲೀಲವಾಗಿ ವರ್ತಿಸಿರುವುದು ಅಯೋಧ್ಯೆಯಲ್ಲಿ ಕಂಡು ಬಂದಿದೆ. ಭಕ್ತರ ಮುಂದೆಯೇ ಪ್ರಣಯದಲ್ಲಿ ತೊಡಗಿದ್ದ ದಂಪತಿಯನ್ನು ಸ್ಥಳೀಯರು ಥಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಯೋಧ್ಯೆಯ ಪವಿತ್ರ ಸ್ನಾನದ ಸ್ಥಳದಲ್ಲಿ ಭಕ್ತರು ಮಿಂದೇಳುತ್ತಿದ್ದರು. ಇವರ ಮಧ್ಯೆ ಸ್ನಾನಕ್ಕೆಂದು ನೀರಿಗಿಳಿದ ದಂಪತಿ ಅಲ್ಲೇ ಪ್ರಣಯದಲ್ಲಿ ತೊಡಗಿದ್ದರು. ದಂಪತಿಯ ಅಶ್ಲೀಲ ವರ್ತನೆಗೆ ಭಕ್ತರು ವಿರೋಧ ವ್ಯಕ್ತಪಡಿಸಿದ್ದರು. ಆದರೂ ದಂಪತಿ ತಮ್ಮ ಆಟ ಮುಂದುವರಿಸಿದ್ದರು. ಆ ಬಳಿಕ ಸ್ಥಳೀಯರೇ ದಂಪತಿಯನ್ನು ಥಳಿಸಿದ್ದಾರೆ.