ಕರ್ನಾಟಕ

karnataka

ETV Bharat / bharat

ಭಾರತ-ಇಂಗ್ಲೆಂಡ್​ ಮೊದಲ ಟೆಸ್ಟ್​: ಪಂದ್ಯದ ಮೇಲೆ ಆಂಗ್ಲರ ಬಿಗಿ ಹಿಡಿತ - India-England

ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ​ ಮೊದಲ ಟೆಸ್ಟ್​ ಪಂದ್ಯದಲ್ಲಿ ರಿಷಭ್ ಪಂತ್ ಮತ್ತು ಚೇತೇಶ್ವರ ಪೂಜಾರ ಉತ್ತಮ ಆಟದ ನಡುವೆಯೂ ಆಂಗ್ಲರು ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದ್ದಾರೆ.

IND vs ENG, 1st Test
ಭಾರತ-ಇಂಗ್ಲೆಂಡ್​ ಮೊದಲ ಟೆಸ್ಟ್​

By

Published : Feb 7, 2021, 6:21 PM IST

ಚೆನ್ನೈ: ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 3ನೇ ದಿನದ ಅಂತ್ಯಕ್ಕೆ ಇಂಗ್ಲೆಂಡ್​ನ ಡೊಮಿನಿಕ್ ಬೆಸ್ ಮಾರಕ ದಾಳಿಗೆ ತತ್ತರಿಸಿದ ಭಾರತ ತಂಡ 6 ವಿಕೆಟ್​ ಕಳೆದುಕೊಂಡು 257 ರನ್​ ಗಳಿಸಿ ಸಂಕಷ್ಟದಲ್ಲಿದೆ.

ಆರಂಭಿಕ ಅಘಾತಕ್ಕೆ ಒಳಗಾಗಿದ್ದ ತಂಡಕ್ಕೆ ರಿಷಭ್ ಪಂತ್ ಮತ್ತು ಚೇತೇಶ್ವರ ಪೂಜಾರ 119 ರನ್​ಗಳ ಜೊತೆಯಾಟ ಚೇತರಿಕೆ ನೀಡಿತು. ಈ ವೇಳೆ ದಾಳಿಗೆ ಇಳಿದ ಬೆಸ್ 73 ರನ್​ ಗಳಿಸಿದ್ದ ಪೂಜಾರರನ್ನು ಬಲಿ ಪಡೆದರು. ನೈಜ ಆಟ ಮುಂದುವರೆಸಿದ್ದ ರಿಷಭ್ ಪಂತ್ 88 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್​ ಸೇರಿದಂತೆ 91 ರನ್​ ಗಳಿಸಿ ಬೆಸ್​ಗೆ ವಿಕೆಟ್​ ಒಪ್ಪಿಸಿ ಶತಕ ವಂಚಿತರಾದರು.

ದಿನದ ಅಂತ್ಯಕ್ಕೆ ವಾಷಿಂಗ್ಟನ್​​​ ಸುಂದರ್​ 33 ಹಾಗೂ ಆರ್​.ಅಶ್ವಿನ್​ 8 ರನ್​ ಗಳಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ. ಡೊಮಿನಿಕ್ ಬೆಸ್ ಭಾರತದ ಪ್ರಮುಖ ನಾಲ್ಕು ವಿಕೆಟ್​ ಪಡೆದು ಮಿಂಚಿದರೆ, ಜೋಪ್ರಾ ಆರ್ಚರ್​ 2 ವಿಕೆಟ್​ ಕಬಳಿಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ ಬೇಗನೆ ವಿಕೆಟ್​ ಒಪ್ಪಿಸಿದ್ದರಿಂದ ಇಂಗ್ಲೆಂಡ್​ ಮೊದಲ ಟೆಸ್ಟ್​ನಲ್ಲಿ ಬಿಗಿ ಹಿಡಿತ ಸಾಧಿಸಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ ತಂಡ ನಾಯಕ ಜೋ ರೂಟ್‌ ದ್ವಿಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ 578 ರನ್ ಗಳಿಸಿದೆ.

ABOUT THE AUTHOR

...view details