ಕರ್ನಾಟಕ

karnataka

ETV Bharat / bharat

ಚೀನಾದ ಉಪಟಳ, ಪ್ರಧಾನಿಯವರ ಮೌನ ದೇಶಕ್ಕೆ ದೊಡ್ಡ ಗಂಡಾಂತರ: ಕಿಡಿಕಾರಿದ ರಾಹುಲ್​ ಗಾಂಧಿ - ಭಾರತದ ಭೂಪ್ರದೇಶದಲ್ಲಿ ಹೆಚ್ಚುತ್ತಿರುವ ಚೀನಾದ ಉಪಟಳದ ಬಗ್ಗೆ ಟ್ವೀಟ್​ ಮಾಡಿದ ರಾಹುಲ್​ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಐದು ಸತ್ಯಗಳನ್ನು ಹಂಚಿಕೊಂಡ ರಾಹುಲ್​ ಗಾಂಧಿ, ಅವರು ಚೀನಾಕ್ಕೆ ಹೆದರಿದ್ದಾರೆ ಮತ್ತು ತಮ್ಮ ಸ್ವಂತ ಇಮೇಜ್ ಅನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ಸತ್ಯವನ್ನು ಮರೆಮಾಚುತ್ತಾರೆ ಎಂದು ಆರೋಪಿಸಿದ್ದಾರೆ.

ಭಾರತದ ಭೂಪ್ರದೇಶದಲ್ಲಿ ಹೆಚ್ಚುತ್ತಿರುವ ಚೀನಾದ ಉಪಟಳದ ಬಗ್ಗೆ ಟ್ವೀಟ್​ ಮಾಡಿದ ರಾಹುಲ್​ ಗಾಂಧಿ
ಭಾರತದ ಭೂಪ್ರದೇಶದಲ್ಲಿ ಹೆಚ್ಚುತ್ತಿರುವ ಚೀನಾದ ಉಪಟಳದ ಬಗ್ಗೆ ಟ್ವೀಟ್​ ಮಾಡಿದ ರಾಹುಲ್​ ಗಾಂಧಿ

By

Published : Jul 11, 2022, 6:43 PM IST

ನವದೆಹಲಿ: ಭಾರತದ ಭೂಪ್ರದೇಶದಲ್ಲಿ ಹೆಚ್ಚುತ್ತಿರುವ ಚೀನಾದ ಉಪಟಳ ಮತ್ತು ಅದರ ಬಗ್ಗೆ ಪ್ರಧಾನಿಯವರ ಮೌನವು ದೇಶಕ್ಕೆ ಅತ್ಯಂತ ಹಾನಿಕಾರಕ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಐದು ಸತ್ಯಗಳನ್ನು ಹಂಚಿಕೊಂಡ ಅವರು, ಅವರು ಚೀನಾಕ್ಕೆ ಹೆದರಿದ್ದಾರೆ ಮತ್ತು ತಮ್ಮ ಸ್ವಂತ ಇಮೇಜ್ ಅನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ಸತ್ಯವನ್ನು ಮರೆಮಾಚುತ್ತಾರೆ ಎಂದು ಆರೋಪಿಸಿದರು.

ಪ್ರಧಾನಿ ಬಗೆಗಿನ ಸತ್ಯಗಳು ಯಾವುವೆಂದರೆ 1. ಚೀನಾಕ್ಕೆ ಹೆದರುತ್ತಾರೆ. 2. ಸಾರ್ವಜನಿಕರಿಂದ ಸತ್ಯವನ್ನು ಮರೆಮಾಚುತ್ತಾರೆ. 3. ಕೇವಲ ತಮ್ಮ ಇಮೇಜ್ ಅನ್ನು ರಕ್ಷಿಸುತ್ತಾರೆ. 4. ಸೇನೆಯ ನೈತಿಕತೆಯನ್ನು ಕಡಿಮೆ ಮಾಡುತ್ತಾರೆ. 5. ದೇಶದ ಭದ್ರತೆಯೊಂದಿಗೆ ಆಟವಾಡುತ್ತಾರೆ ಎಂದು ರಾಹುಲ್​ ಗಾಂಧಿ ವಿವರಿಸಿದ್ದಾರೆ.

ಚೀನಾದ ಉಲ್ಲಂಘನೆ ಮತ್ತು ಪ್ರಧಾನಿ ಆ ಸಮಸ್ಯೆಯನ್ನು ನಿಭಾಯಿಸುವ ವಿಷಯದ ಬಗ್ಗೆ ಮಾಜಿ ಕಾಂಗ್ರೆಸ್ ಅಧ್ಯಕ್ಷರು ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಚೀನಾ ಭಾರತದ ಭೂಪ್ರದೇಶವನ್ನು ಆಕ್ರಮಿಸಿಕೊಳ್ಳುವುದನ್ನು ಮುಂದುವರೆಸಿದೆ ಮತ್ತು ಅದನ್ನು ಮರಳಿ ಪಡೆಯಲು ಸರ್ಕಾರ ಏನೂ ಮಾಡಿಲ್ಲ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕಿಡಿಕಾರಿದ್ದಾರೆ.

ಇದನ್ನೂ ಓದಿ :ಕುಟುಂಬವನ್ನೇ ಒತ್ತೆಯಾಳಾಗಿ ಇಟ್ಟುಕೊಂಡ ಯೋಧ: ಕೊನೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ABOUT THE AUTHOR

...view details